ಕುಣಿಗಲ್‌ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹೀ.ಚಿ.ಬೋರಲಿಂಗಯ್ಯ

ತಾಲ್ಲೂಕಿನಲ್ಲಿ ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಡಾ. ಹೀ.ಚಿ.ಬೋರಲಿಂಗಯ್ಯ ನವರ ಅಧ್ಯಕ್ಷತೆಯಲ್ಲಿ ೨೦೧೫ ಜನವರಿ ೧೬ರಂದು ವೈಭವಯುತವಾಗಿ ನಡೆಸಲಾಗುವುದೆಂದು ತಾಲ್ಲೂಕು ಕಸಾಪ ಅಧ್ಯಕ್ಷ ದಿನೇಶ್‌ಕುಮಾರ್‌ ತಿಳಿಸಿದರು. ಅವರು ಪಟ್ಟಣದ ಜಿಕೆಬಿಎಂಎಸ್‌ನ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೧೯೯೩ರಲ್ಲಿ ತಗಡೂರು ವೀರಭದ್ರಪ್ಪ ಅವರು ತಾಲ್ಲೂಕು ಕಸಾಪದ ಅಧ್ಯಕ್ಷರಾಗಿದ್ದಾಗ ಸಾಹಿತಿ ಬೀಚನಹಳ್ಳಿ ಕರಿಗೌಡ ಸಮ್ಮೇಳನಾಧ್ಯಕ್ಷತೆಯಲ್ಲಿ ಮೊದಲನೇ ತಾಲ್ಲೂಕು...