ಯರವಾಡದ ಜೈಲಿನಲ್ಲಿ ಕಸಬ್ಗೆ ಗಲ್ಲು

ಮುಂಬೈ ಭೀಕರ ನರಮೇಧದ
(೨೬/೧೧) ಸಂದರ್ಭದಲ್ಲಿ ಜೀವಂತ
ವಾಗಿ ಸೆರೆಸಿಕ್ಕ ಲಷ್ಕರ್-ಎ
ತೊಯ್ಬಾದ ಏಕೈಕ ಭಯೋತ್ಪಾದಕ
ಅಜ್ಮಲ್ ಕಸಬ್ನನ್ನು ನೆನ್ನೆ ಬೆಳಿಗ್ಗೆ
೭.೩೦ ಕ್ಕೆ ಪುಣೆಯ ಯರವಾಡ
ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ಕಳೆದ ನವೆಂಬರ್ ೫ ರಂಂದು
ಕಸಬ್ ಕಮಾದಾನ ಕೋರಿ ಸಲ್ಲಿಸಿದ್ದ
ಮನವಿಯನ್ನು ರಾಷ್ಟ್ರಪತಿ ತಿರಸ್ಕರಿ
ಸಿದ್ದರು. ಅರ್ಜಿ ತಿರಸ್ಕೃತವಾದ ಪತ್ರ
ಕೇಂದ್ರ ಗ್ರಹ ಸಚಿವ ಸುಶೀಲ್
ಕುಮಾರ್ ಶಿಂಧೆ ಅವರಿಗೆ ನ. ೮
ರಂದು ತಲುಪಿತ್ತು.
ಕೂಡಲೇ ಕೇಂದ್ರ ಗ್ರಹ
ಸಚಿವಾಲಯದ ಮಹಾರಾಷ್ಟ್ರ
ಸರ್ಕಾರಕ್ಕೆ ನ.೨೧ ರಂದು ಕಸಬ್
ನನ್ನು ಗಲ್ಲಿಗೇರಿಸಲು ಏರ್ಪಾಡು
ಮಾಡುವಂತೆ ಸೂಚಿಸಿತ್ತು.
ಮುಂಬೈನ ಆರ್ಥರ್ ರೋಡ್
ಜೈಲಿನಲ್ಲಿ ಗಲ್ಲಿಗೇರಿಸುವ ವ್ಯವಸ್ಥೆ
ಯಿಲ್ಲದಿದ್ದ ಕಾರಣ ಅವನನ್ನು ಪುಣೆ
ಯ ಯರವಾಡ ಜೈಲಿನಲ್ಲಿ ನೆನ್ನೆ
ಬೆಳಿಗ್ಗೆ ೭.೩೦ಕ್ಕೆ ಸರಿಯಾಗಿ ಗಲ್ಲಿಗೇರಿ
ಸಲಾಯಿತು.
ಗಲ್ಲಿಗೇರಿಸುವ ಮುನ್ನ ಕಸಬ್
ನನ್ನು ನಿನ್ನ ಕೊನೆಯಾಸೆ ಏನು ?
ಎಂದಾಗ ಅವರು ಏನೂ ಇಲ್ಲ
ಎಂದು ಉತ್ತರಿಸಿದ.
ಕಸಬ್ನನ್ನು ಗಲ್ಲಿಗೇರಿಸಿದ
ವಿಷಯವನ್ನು ಮಹಾರಾಷ್ಟ್ರದ ಗ್ರಹ
ಸಚಿವ ಆರ್.ಆರ್. ಪಾಟೀಲ್
ಅವರು ಸುದ್ದಿ ಗೋಷ್ಠಿಯಲ್ಲಿ
ಪ್ರಕಟಿಸುತ್ತಿದ್ದಂತೆ ದೇಶಾದ್ಯಂತ
ಸಂತಸದ ಅಲೆ ಎದ್ದಿತು.

No Comments to “ಯರವಾಡದ ಜೈಲಿನಲ್ಲಿ ಕಸಬ್ಗೆ ಗಲ್ಲು”

add a comment.

Leave a Reply

You must be logged in to post a comment.