ಕಸವಿಲೇವಾರಿ ಘಟಕಕ್ಕೆ ೧೭ ಕೋಟಿ ₹ ಬಿಡುಗಡೆ
ದಿನೇ ದಿನೇ ಕಸದ ಸಮಸ್ಯೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಆಧುನಿಕ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ೭೦ ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ನಗರಾಭಿವೃದಿಟಛಿ ಸಚಿವ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು, ತುಮಕೂರು, ಮಂಗಳೂರು ಸೇರಿದಂತೆ ಹಲವು ಮಹಾನಗರ ಪಾಲಿಕೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ತ್ಯಾಜ್ಯ ವಿಲೇವಾರಿಗಾಗಿಯೇ ರಾಜ್ಯಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ನಿಗಮ ರಚನೆ ಮಾಡಲು ಸರ್ಕಾರ ಉದ್ದೇಶಿಸಿದ್ದು, ಪ್ರಸ್ತುತ ಮಹಾನಗರ ಪಾಲಿಕೆಗಳಲ್ಲಿ ಜಾರಿಯಲ್ಲಿರುವ ಹಳೇ ಪದ್ದತಿಯನ್ನು ಕೈಬಿಟ್ಟು ಆಧುನಿಕ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುವುದು ಎಂದು ಹೇಳಿದರು.
ತುಮಕೂರಿನ ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕವನ್ನು ಆಧುನೀಕರಣಗೊಳಿಸಲು ೧೭ ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ಈ ತ್ಯಾಜ್ಯ ವಿಲೇವಾರಿ ಘಟಕ ಆಧುನಿಕ ತಂತ್ರಜ್ಞಾನದಿಂದ ಕಸ ಸಂಸ್ಕರಣೆ ಮಾಡಲಿದೆ. ರೈತ ಶಿವಕುಮಾರ್‌ ಸಾವಿನ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ. ಕಸ ವಿಲೇವಾರಿ ಘಟಕದಲ್ಲಿ ಶಿವಕುಮಾರ್‌ ಅವರ ಜಮೀನು ಸೇರಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅಗತ್ಯ ಇರುವ ಭೂಮಿ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಗುರುತು ಮಾಡಲಾಗಿದೆ. ಪರಿಸರಕ್ಕೆ ಧಕ್ಕೆ ಬರದಂತೆ ಸುತ್ತಮುತ್ತಲ ಜನರ ಆರೋಗ್ಯಕ್ಕೆ ತೊಂದರೆಯಾಗದಂತೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಕಸ ವಿಲೇವಾರಿ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮಗ್ರ ಮೂಲಸೌಕರ್ಯ ಕಲ್ಪಿಸುವ ೭೨೦೦ ಕೋಟಿ ರೂ. ಮೊತ್ತದ ಬೃಹತ್‌ ಯೋಜನೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ತಡೆಯೊಡ್ಡಿದೆ. ಆದರೂ ಸರ್ಕಾರ ಕಸ ವಿಲೇವಾರಿಗೆ ಆದ್ಯತೆ ನೀಡಿದೆ. ನರ್ಮ್‌ ಯೋಜನೆಯಡಿ ಬೃಹತ್‌ ಪ್ರಮಾಣದ ಹಣವನ್ನು ಅಭಿವೃದಿಟಛಿಗೆ ಮುಂದಾಗಿತ್ತು.
ಕೇಂದ್ರ ಸರ್ಕಾರದ ಕೋರಿಕೆಯಂತೆ ನಾವು ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಯೋಜನೆಗಳಿಗೆ ಸಂಬಂ˜ಸಿದಂತೆ ಕ್ರಿಯಾ ಯೋಜನೆ ತಯಾರಿಸಿ ನಗರಾಭಿವೃದಿಟಛಿ ಇಲಾಖೆಗೆ ಕಳುಹಿಸಿದ್ದೆವು. ಕೆಲವು ಪ್ರಸ್ತಾವನೆ ಹಣಕಾಸು ಇಲಾಖೆಗೆ ತಲುಪುತ್ತಿದ್ದಂತೆ ಕೇಂದ್ರ ತನ್ನ ನಿಲುವಿನಿಂದ ಹಿಂದೆ ಸರಿದಿದೆ ಎಂದು ದೂರಿದರು.
ನರ್ಮ್‌ ಯೋಜನೆ ವಿಭಜನೆ ಮಾಡಿ ನಂತರ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದೆ. ಆದರೆ, ಕೇಂದ್ರ ನಿರ್ಧಾರ ಕೈಗೊಳ್ಳುವ ಮುನ್ನವೇ ಯೋಜನೆಯಡಿ ೧ ಸಾವಿರ ಕೋಟಿ ರೂ. ಪಡೆದುಕೊಂಡಿದ್ದೆವು. ಉಳಿದ ಹಣ ಮುಂದೆ ಕೇಂದ್ರದ ನಿರ್ಧಾರದ ಮೇಲೆ ನಿಂತಿದೆ ಎಂದು ತಿಳಿಸಿದರು.ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ೧೦೦೦ ಕೋಟಿ ರೂ. ವೆಚ್ಚದ ಶೇ.೬೦ರಷ್ಟು ಕ್ರಿಯಾ ಯೋಜನೆ ಸಿದಟಛಿಪಡಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ.
ಇದು ಮೂರು ವರ್ಷದ ಯೋಜನೆಯಾಗಿದ್ದು ಅದೇ ರೀತಿ ನಗರಸಭೆ, ಪುರಸಭೆಗಳಲ್ಲಿ ಸೌಕರ್ಯಗಳನ್ನು ಒದಗಿಸಲು ಪ್ರತಿ ನಗರ ಸಭೆಗೆ ೩೦ ಕೋಟಿ, ಪುರಸಭೆಗೆ ೧೫ ಹಾಗೂ ಪಟ್ಟಣ ಪಂಚಾಯಿತಿ ೫ ಕೋಟಿ ಹಣ ನೀಡಲಾಗಿದೆ ಎಂದರು.
No Comments to “ಕಸವಿಲೇವಾರಿ ಘಟಕಕ್ಕೆ ೧೭ ಕೋಟಿ ₹ ಬಿಡುಗಡೆ”
add a comment.
Leave a Reply
You must be logged in to post a comment.