ಮನುಷ್ಯ&ಪ್ರಕೃತಿ ಒಂದಕ್ಕೊಂದು ಪೂರಕವಾಗಿರಬೇಕು

ಮನುಷ್ಯ ಮತ್ತು ಪ್ರಕೃತಿ ಒಂದಕ್ಕೊಂದು ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು ಎಂದು ವಿಧಾನಪರಿಷತ್‌ ಸಭಾಪತಿ ಡಿ.ಹೆಚ್‌.ಶಂಕರಮೂರ್ತಿ ಅವರು ಕಿವಿಮಾತು ಹೇಳಿದರು.
ನಗರದ ತುಮಕೂರು ವಿಶ್ವವಿದ್ಯಾನಿಲಯದ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿ ಹಾಗೂ ಡಬ್ಲ್ಯೂಎಎಸ್‌ಹೆಚ್‌ಇಎಲ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶ್ವದಲ್ಲಿಯೇ ಉತ್ತಮವಾದ ಸಂಸ್ಕೃತಿ, ಸಂಸ್ಕಾರವನ್ನು ಹೊಂದಿದ್ದ ಭಾರತೀಯರಿಗೂ ಪರಿಸರ ಜಾಗೃತಿ ಮೂಡಿಸುವ ಪರಿಸ್ಥಿತಿಗೆ ನಾವೀಗ ಬಂದಿರುವುದು ವಿಪರ್ಯಾಸದ ಸಂಗತಿ. ಇಂತಹ ದಿನಗಳಲ್ಲಿ ಪರಿಸರ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು, ದಿನಾಚರಣೆಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕಾದ ಅನಿವಾರ್ಯತೆ ಇದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವುದೇ ಶುಭ ಕೆಲಸಗಳಲ್ಲಿ ಜ್ಯೋತಿಯನ್ನು ಬೆಳಗಿಸಿ ಕತ್ತಲೆಯಿಂದ ನಮ್ಮನ್ನು ಬೆಳಕಿನೆಡೆಗೆ ಸಾಗಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಮುಂದಡಿ ಇಡುವುದು ನಮ್ಮ ಪುರಾತನ ಸಂಸ್ಕೃತಿ. ಬರ್ತ್‌ ಡೇಗಳಲ್ಲಿ ಜ್ಯೋತಿ
ನಂದಿಸುವುದು, ಕಾರ್ಯಕ್ರಮಗಳಲ್ಲಿ ಟೇಪ್‌ ಕತ್ತರಿಸುವುದು ಇಂದಿನ ¶ಾ್ಯಷನ್‌ ಆಗಿಬಿಟ್ಟಿದೆ ಎಂದವರು ಇಂದಿನ ವಾಸ್ತವ ಸ್ಥಿತಿಯನ್ನು ವಿಶ್ಲೇಷಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯ ಹಾಗೂ ರಾಷ್ಟ್ರಗಳಲ್ಲಿ ಪರಿಸರಕ್ಕಾಗಿ ಶ್ರಮಿಸಿದ ಪರಿಸರವಾದಿಗಳು, ಸಮಾಜಸೇವಕರು ಹಾಗೂ ಸಾರ್ಕ್‌ ರಾಷ್ಟ್ರಗಳ
ಪ್ರತಿನಿ˜ಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಪ್ರೊ.ಎ.ಹೆಚ್‌.ರಾಜಾಸಾಬ್‌ ಅವರು ವಹಿಸಿದ್ದರು. ವೇದಿಕೆಯಲ್ಲಿ ತುಮಕೂರು ವಿವಿ ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ಸಿ.ಜಗನ್ನಾಥ್‌, ಎನ್‌ಆರ್‌ಐ ವಿಂಗ್‌ನ ಉಪಾಧ್ಯಕ್ಷ ವಿ.ಸಿ.ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

No Comments to “ಮನುಷ್ಯ&ಪ್ರಕೃತಿ ಒಂದಕ್ಕೊಂದು ಪೂರಕವಾಗಿರಬೇಕು”

add a comment.

Leave a Reply

You must be logged in to post a comment.