ಹೋರಾಟಗಾರರ ಮೇಲಿನ ಕೇಸ್‌ ವಾಪಸ್‌ಗೆ ಸಂಪುಟ ಅಸ್ತು

ಬೆಂಗಳೂರು : ರೈತರು, ಕಾರ್ಮಿಕರು ಸೇರಿದಂತೆ ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡಿದ್ದವರ ಮೇಲೆ ಹೂಡಲಾಗಿದ್ದ ಹಲವು ಮೊಕದ್ದಮೆಗಳನ್ನು ವಾಪಸ್‌ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಹೊನ್ನಾಳಿ ತಾಲ್ಲೂಕಿನ ಚಿಕ್ಕನ ಹಳ್ಳಿಯಲ್ಲಿ ವಿದ್ಯುತ್‌ ಸಮಸ್ಯೆ ನಿವಾರಣೆಗೆ ಒತ್ತಾಯಿಸುತ್ತಿದ್ದ ರೈತರ ಮೇಲೆ ಹೂಡಲಾಗಿದ್ದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು.
ಇದೇರೀತಿಇಂದಿರಾ ನಗರದಲ್ಲಿ ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾಗಿದ್ದ ಮಾರಸಂದ್ರ ಮುನಿಯಪ್ಪ, ಕೊಪ್ಪಳ ನಗರದ ಪೊಲೀಸ್‌ಠಾಣೆಯಲ್ಲಿ ೨೦೧೧ರಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಟಯೋಟಾ ಕಿರ್ಲೋಸ್ಕರ್‌ಕಾರ್ಮಿಕರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು.
ದ್ಠ̈ಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಚಂಡಮಾರುತ ತಡೆಯಲು ಕೈಗೊಳ್ಳಬೇಕಾಗಿರುವ ಮಾರ್ಗೋಪಾಯಗಳ ಬಗ್ಗೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಚಂಡಮಾರುತ ತಡೆಯೋಜನೆಗೆ ಕೇಂದ್ರ ಸರ್ಕಾರ ಶೇ ೭೫ ರಷ್ಟು ಹಣಕಾಸಿನ ನೆರವು ನೀಡುತ್ತಿದೆ. ಉಳಿದ ಶೇ ೨೫ ರಷ್ಟು ಹಣರಾಜ್ಯ ಭರಿಸಲಿದೆ. ಒಟ್ಟು ೧೨೦.೬೦ ಕೋಟಿ ರೂ ವೆಚ್ಚದ ಯೋಜನೆ ಇದಾಗಿದೆ ಎಂದರು.
ಕೊಟ್ಟೂರು &ಹರಿಹರ ರೈಲ್ವೆ ಯೋಜನೆಗೆ ವಶಪಡಿಸಿಕೊಂಡಿದ್ದ ಭೂಮಿಗೆ ೨೫ ಕೋಟಿರೂ ಹೆಚ್ಚುವರಿ ಪರಿಹಾರ ನೀಡಲು ಸಂಪುಟ ಸಮ್ಮತಿ ಸೂಚಿಸಿದೆ ಎಂದು ಜಯಚಂದ್ರ ತಿಳಿಸಿದರು.

No Comments to “ಹೋರಾಟಗಾರರ ಮೇಲಿನ ಕೇಸ್‌ ವಾಪಸ್‌ಗೆ ಸಂಪುಟ ಅಸ್ತು”

add a comment.

Leave a Reply