ಪ್ರವಾಸೋದ್ಯಮ ಅಭಿವೃದಿಟಛಿಗಾಗಿ – ಮೂಲ ಸೌಕರ್ಯ ಸಂಸ್ಥೆ ಸ್ಥಾಪನೆ

ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಭೂಮಿಯನ್ನು ಖಾಸಗಿ ವಲಯಕ್ಕೆಗುತ್ತಿಗೆ ನೀಡಿ, ಪ್ರವಾಸೋದ್ಯಮವನ್ನು ಅಭಿವೃದಿಟಛಿಪಡಿಸುವ ಸಲುವಾಗಿ ಪ್ರವಾಸೋದ್ಯಮ ಮೂಲ ಸೌಕರ್ಯ ಸಂಸ್ಥೆ ಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ವಸತಿ, ಮೂಲ ಸೌಕರ್ಯಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯಲ್ಲಿರುವ ಭೂಮಿಯನ್ನು ಖಾಸಗಿ ವಯಲಕ್ಕೆ ಗುತ್ತಿಗೆ ನೀಡಿ ಪ್ರತ್ಯೆಕ್ಷ ಹಾಗೂ ಪರೋಕ್ಷವಾಗಿ ೪೩ ಲಕ್ಷಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತು ವಿವರ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ೧,೪೬೭.೩೮ ಎಕರೆ ಭೂಮಿಯಿದೆ. ಇಲ್ಲಿ ಮೂಲ ಸೌಕರ್ಯಕಲ್ಪಿಸಲು ೧೪,೭೩೭ ಕೋಟಿರೂ ಹಣ ಹೂಡಿಕೆ ಮಾಡಬೇಕಾಗುತ್ತದೆ.ಇಷ್ಟೊಂದು ಹಣ ಸರ್ಕಾರದ ಬಳಿ ಇಲ್ಲ. ಹೀಗಾಗಿ ಸರ್ಕಾರ ಖಾಸಗಿ ವಲಯದಿಂದ ಬಂಡವಾಳ ಆಕರ್ಷಿಸಲು ಉದ್ದೇಶಿಸಿದೆ ಎಂದು ಹೇಳಿದರು.
ಕರ್ನಾಟಕ ಪ್ರವಾಸೋದ್ಯಮದಲ್ಲಿ ಇಡೀದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ವಿದೇಶದಿಂದ ಆಗಮಿಸುವ ಪ್ರವಾಸಿಗರು ಕರ್ನಾಟಕಕ್ಕೆಹೆಚ್ಚು ಭೇಟಿ ನೀಡುತ್ತಾರೆ. ವಿದೇಶಿಗರನ್ನು ಆಕರ್ಷಿಸುವ ವಿಚಾರದಲ್ಲಿ ೯ನೇ ಸ್ಥಾನದಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಇದು ಉತ್ತಮ ಮಾರ್ಗಎಂದು ಹೇಳಿದರು.
ಪ್ರವಾಸೋದ್ಯಮ ಅಭ್ಯುದಯಕ್ಕಾಗಿ ನೀಲನಕ್ಷೆತಯಾರಾಗಿದೆ. ಖಾಸಗಿ ವಲಯ ಕೈಜೋಡಿಸದಿದ್ದರೆ ಸಮಗ್ರ ಅಭಿವೃದಿಟಛಿ ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರ್ಕಾರದ ನಿಲುವನ್ನು ಜಯಚಂದ್ರ ಸಮರ್ಥಿಸಿಕೊಂಡರು.
ಪ್ರವಾಸೋದ್ಯಮ ಸಚಿವ ಆರ್‌.ವಿ. ದೇಶಪಾಂಡೆ ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಕೈಗಾರಿಕೆಗಳಿಗೆ ಮನಸೋ ಇಚ್ಚೆ ಭೂಮಿ ನೀಡಿದ್ದರು. ಈಗ ಪ್ರವಾಸೋದ್ಯದಲ್ಲೂ ಇದೇರೀತಿ ಭೂ ಹಂಚಿಕೆಗೆ ಮುಂದಾಗಿದ್ದಾರಲ್ಲ ಎನ್ನುವ ಪ್ರಶ್ನೆಗೆ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಖಾಸಗಿ ವಲಯವನ್ನು ಪ್ರೋತ್ಸಾಹಿಸುತ್ತಿರುವುದರ ಹಿಂದೆ ಪ್ರವಾಸೋದ್ಯಮವನ್ನು ಖಾಸಗಿಕರಣಗೊಳಿಸುವ ಯಾವುದೇ ಉದ್ದೇಶವಿಲ್ಲ. ಆ ರೀತಿಯ ಆತಂಕ ಅನಗತ್ಯ ಎಂದರು.

No Comments to “ಪ್ರವಾಸೋದ್ಯಮ ಅಭಿವೃದಿಟಛಿಗಾಗಿ – ಮೂಲ ಸೌಕರ್ಯ ಸಂಸ್ಥೆ ಸ್ಥಾಪನೆ”

add a comment.

Leave a Reply

You must be logged in to post a comment.