ಮಠಗಳ ಮೇಲೆ ಅಂಕುಶವಿಲ್ಲ

ಮಠಗಳ ಮೇಲೆ ಅಂಕುಶ ಹಾಕುವ ಕಠಿಣ ನಿರ್ಧಾರದಿಂದ ಹಿಂದೆ ಸರಿದಿರುವರಾಜ್ಯ ಸರ್ಕಾರ, ಈ ಕುರಿತು ವಿಧಾನಮಂಡಲದಲ್ಲಿ ಮಂಡಿಸಿರುವ ಮಸೂದೆಯನ್ನು ಶೀತಲ ಗೃಹಕ್ಕೆ ಒಯ್ಯಲು ತೀರ್ಮಾನಿಸಿದೆ.
ಹಾಗೊಂದು ವೇಳೆ ಸುಪ್ರೀಂಕೋರ್ಟ್‌ ಮಠಗಳ ನಿಯಂತ್ರಣಕ್ಕೆ ಕಾನೂನು ರೂಪಿಸಬೇಕು ಎಂದು ನಿರ್ದೇಶನ ನೀಡಿದರೆ ಮಾತ್ರ ಕಾನೂನು ಜಾರಿಗೊಳಿಸುವ ನಿಲುವಿಗೆ ಸರ್ಕಾರ ಬಂದಿದೆ.
ಮಠಗಳ ಮೇಲೆ ನಿಯಂತ್ರಣ ಸಾ˜ಸಲು ಮುಂದಾದ ಬೆಳವಣಿಗೆ ಹಿನ್ನೆಲೆಯಲ್ಲಿರಾಜ್ಯದ ವಿವಿಧ ಮಠಾ˜ಪತಿಗಳು ಸರ್ಕಾರದ ಮೇಲೆ ಮುಗಿಬಿದ್ದ ಬೆಳವಣಿಗೆಯಿಂದಾಗಿ ಕಂಗಾಲಾದ ಸರ್ಕಾರತನ್ನ ನಿಲುವಿನಿಂದ ಹಿಂದೆ ಸರಿದಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಸಹ ಈ ಬಗ್ಗೆ ಗಂಭೀರಚರ್ಚೆ ನಡೆದಿದ್ದು, ಮಠಗಳಮೇಲೆ ಕೈ ಹಾಕುವುದು ಬೇಡಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ. ಜಯಚಂದ್ರಅವರಿಗೆ ಸಲಹೆ ಮಾಡಿದರು. ಸಂಪುಟದ ಹಲವು ಸಚಿವರು ಸಹ ಮಠಗಳಿಗೆ ಮೂಗುದಾರ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದರು.ಇದರ ಪರಿಣಾಮ ಸಧ್ಯಕ್ಕೆ ಈ ವಿಚಾರದಲ್ಲಿ ಮುಂದಿನ ಹೆಜ್ಜೆಇಡದಿರಲು ಸರ್ಕಾರ ತೀರ್ಮಾನಿಸಿದೆ.
ಸರ್ಕಾರದ ಮೇಲೆ ಮುನಿಸಿಕೊಂಡಿರುವ ಮಠಾ˜ಶರಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಲು ನಿರ್ಧರಿಸಿದ್ದು, ಸರ್ಕಾರ ವಿಧೇಯಕ ಮಂಡಿಸಲು ಕಾರಣಗಳೇನು?.ಯಾವಉದ್ದೇಶದಿಂದ ಮಸೂದೆ ಸಿದಟಛಿಪಡಿಸಲಾಯಿತು ಎನ್ನುವ ಬಗ್ಗೆ ಮಾಹಿತಿಯನ್ನುಎಲ್ಲಾ ಮಠಾ˜ಶರಿಗೆ ಇ ಮೇಲ್‌ ಮೂಲಕ ರವಾನಿಸಲು ತೀರ್ಮಾನಿಸಲಾಯಿತು.ಅಗತ್ಯಬಿದ್ದರೆ ಮಠಾ˜ಶರ ಸಭೆಕರೆದು ಸರ್ಕಾರದ ಸಂದಿಗ್ದ ಪರಿಸ್ಥಿತಿಯನ್ನು ಅರ್ಥಮಾಡಿಸಲು ಉದ್ದೇಶಿಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಮಠಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎನ್ನುವಉದ್ದೇಶದಿಂದಇಂತಹ ವಿಧೇಯಕವನ್ನು ಮಂಡಿಸಲಿಲ್ಲ. ಬದಲಿಗೆ ಸನ್ನಿವೇಶ ಆ ರೀತಿ ಮಾಡಿಸಿತು. ಇದೇ ವಿಚಾರಕ್ಕೆ ಸಂಬಂ˜ಸಿದಂತೆ ಜನವರಿ ೧೩ ರಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿವಿಧೇಯಕ ಮಂಡಿಸುವಂತೆ ಕಾನೂನು ತಢ́ರು ಸಲಹೆ ನೀಡಿದರು.ಅವರ ಮಾತಿಗೆ ಮನ್ನಣೆ ನೀಡಿ ಸರ್ಕಾರ ವಿಧೇಯಕ ಮಂಡಿಸಿತು ಎಂದರು.
ಕಾನೂನು ಸಚಿವನಾಗಿ ನಾನು ನನ್ನಕರ್ತವ್ಯ ನಿಭಾಯಿಸಿದ್ದೇನೆ. ಸುಪ್ರೀಂಕೋರ್ಟ್‌ತಮಗೆ ಮಾಹಿತಿಕೋರಿದರೆ ಆಗ ನಾನೇನು ಮಾಡಬೇಕು.ರಾಜ್ಯದಲ್ಲಿ ೩೫ ಸಾವಿರ ದೇವಾಲಯಗಳಿವೆ. ಇವುಗಳ ಮೇಲಿನ ನಿಯಂತ್ರಣಕ್ಕೆ ಸೂಕ್ತ ಕಾನೂನು ಇಲ್ಲದಿದ್ದರೆಇದಕ್ಕೆಉತ್ತರ ಹೇಳಬೇಕಾದವನು ನಾನು. ಈ ಎಲ್ಲಾ ವಿಚಾರಗಳನ್ನು ಸಂಪುಟದ ಗಮನಕ್ಕೆ ತಂದಿದ್ದೇನೆ. ಬರುವ ದಿನಗಳಲ್ಲಿ ನ್ಯಾಯಾಲಯದಆದೇಶದಂತೆ ಮುನ್ನಡೆಯುತ್ತೇನೆಎಂದು ಹೇಳಿದರು.
ಜನವರಿ೧೩ ರಂದು ಪ್ರಕರಣ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿಸರ್ಕಾರ ಏನು ಮಾಡಬೇಕುಎನ್ನುವ ವಿಚಾರಕ್ಕೆ ಸಂಬಂ˜ಸಿದಂತೆ ರಾಜ್ಯದಅಡ್ವೋಕೆಟ್‌ಜನರಲ್‌ ಹಾಗೂ ಕಾನೂನು ಪಂಡಿತರಜತೆಚರ್ಚೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಧ್ಯಕ್ಕೆ ಮಠಗಳ ಮೇಲೆ ನಿಯಂತ್ರಣ ಸಾ˜ಸುವ ಮಸೂದೆ ವಿಚಾರದಲ್ಲಿ ಸರ್ಕಾರ ಮೃದುಧೋರಣೆ ತಳೆಯಲಿದೆ.ಆದರೆ ಈಗಿನ ಪರಿಸ್ಥಿತಿಯಲ್ಲಿ ಮಠಗಳಿಗೆ ಒಂದು ಕಾನೂನು ತೀರಾಅಗತ್ಯವಾಗಿದೆಎಂದು ಬಲವಾಗಿ ಪ್ರತಿಪಾದಿಸಿದರು.

No Comments to “ಮಠಗಳ ಮೇಲೆ ಅಂಕುಶವಿಲ್ಲ”

add a comment.

Leave a Reply

You must be logged in to post a comment.