ಕಟ್ಟಿಗೇನಹಳ್ಳಿ ಮೃತನ ಕುಟುಂಬಕ್ಕೆ ಚೆಕ್‌ ವಿತರಣೆ

ತುಮಕೂರು ತಾಲ್ಲೂಕು ಕಟ್ಟಿಗೇನಹಳ್ಳಿಯ ಮೃತ ಶಿವಕುಮಾರ್‌ ಸಾವಿನ ಹಿನ್ನಲೆಯಲ್ಲಿ ಆತನ ಕುಟುಂಬಕ್ಕೆ ವಿವಿಧ ರೀತಿಯ ಸಹಕಾರಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ತುಮಕೂರು ವಿಶ್ವವಿದ್ಯಾಲಯ ಮುಂದಾಗಿವೆ.
ಈ ಜಿಲ್ಲಾ˜ಕಾರಿಗಳ ಕಛೇರಿ ಸಭಾಂಗಣದಲ್ಲಿ ಈ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ˜ಕಾರಿಗಳು, ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಆಯುಕ್ತರು, ತುಮಕೂರು ವಿವಿಯ ಉಪಕುಲಪತಿಗಳು ತಮ್ಮ ವ್ಯಾಪ್ತಿಯಲ್ಲಿ ಮೃತನ ಕುಟುಂಬಕ್ಕೆ ನೀಡಲು ನಿರ್ಧರಿಸಿರುವ ಆರ್ಥಿಕ ಸಹಾಯದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಜಿಲ್ಲಾಡಳಿತದ ವತಿಯಿಂದ ಅಂತ್ಯಸಂಸ್ಕಾರಕ್ಕೆ ೧೦೦೦ ರೂ. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ೨೦ ಸಾವಿರ ರೂ.ಗಳ ಚಕ್‌ ಅನ್ನು ಇದೇ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ˜ಕಾರಿ ಕೆ.ಎಸ್‌.ಸತ್ಯಮೂರ್ತಿಯವರು ಮೃತ ಶಿವಕುಮಾರ್‌ ತುಮಕೂರು ವಿಶ್ವವಿದ್ಯಾಲಯದಲ್ಲಿ ಸಂಚಿತ ವೇತನ ನೌಕರನಾಗಿ ಕೆಲಸ ಮಾಡುತ್ತಿದ್ದರು. ನಮ್ಮ ವ್ಯಾಪ್ತಿಯಲ್ಲಿ ಯಾವರೀತಿ ಸಹಾಯ ಮಾಡಬಹುದು ಎಂಬುದರ
ಬಗ್ಗೆ ವಿವಿಧ ಇಲಾಖೆಗಳ ಜೊತೆ ಚರ್ಚಿಸಿ ಅದರಂತೆ ಒಂದು ನಿರ್ಧಾರಕ್ಕೆ ಬರಲಾಗಿದೆ. ಇಂದು ನೀಡಲಾಗುತ್ತಿರುವ ಚಕ್‌ ಜೊತೆಗೆ ಮೃತನ ಪತ್ನಿಗೆ ಮಾಸಿಕ ೫೦೦ ರೂಗಳ ವಿಧವಾ ವೇತನ ನೀಡಲಾಗುವುದು. ಮೃತನ ಅಣ್ಣ ರುದ್ರೇಶ್‌ ಸಹ ಅಂಗವಿಕಲನಾಗಿದ್ದು ಆತನಿಗೆ ಬರುತ್ತಿದ್ದ ೫೦೦ ರೂಗಳ ಮಾಸಾಶನವನ್ನು ೧೨೦೦ ರೂಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಆಡಳಿತ ವೈ¶ಲ್ಯವಿಲ್ಲ
ಶನಿವಾರದಂದು ಕಟ್ಟಿಗೇನಹಳ್ಳಿಯಲ್ಲಿ ನಡೆದ ಘಟನೆಗೆ ಸಂಬಂ˜ಸಿದಂತೆ ಪೊಲೀಸ್‌ ಇಲಾಖೆಯಿಂದ ತನಿಖೆ ನಡೆಯುತ್ತಿದೆ. ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದ ಕಾಮಗಾರಿಯನ್ನು ಕಾನೂನು ಸೇವಾ ಪ್ರಾ˜ಕಾರದ ಆದೇಶದಂತೆ ನಡೆಸುತ್ತಿದ್ದೇವೆ.

No Comments to “ಕಟ್ಟಿಗೇನಹಳ್ಳಿ ಮೃತನ ಕುಟುಂಬಕ್ಕೆ ಚೆಕ್‌ ವಿತರಣೆ”

add a comment.

Leave a Reply

You must be logged in to post a comment.