ಆಗಸ್ಟ್‌ ಅಂತ್ಯದವರೆಗೆ ನೀರಿನ ಸಮಸ್ಯೆ ಇಲ್ಲ

ತುಮಕೂರು ನಗರ ಪ್ರದೇಶಕ್ಕೆ ೧.೧೩ ಟಿಎಂಸಿ ನೀರು ನಿಗ˜ಯಾಗಿದ್ದು, ಜನವರಿ ಅಂತ್ಯಕ್ಕೆ ನಗರದ ಬುಗುಡನಹಳ್ಳಿ ಹಾಗೂ ಹೆಬ್ಬಾಕ ಕೆರೆಗಳಿಗೆ ಕನಿಷ್ಠ ಒಂದು ಟಿಎಂಸಿಯಷ್ಟಾದರೂ ಹೇಮಾವತಿ ನೀರು ಹರಿಸುವಂತೆ ತುಮಕೂರು ನಗರ ಶಾಸಕ ಡಾ.ರμಕ್‌ ಅಹಮದ್‌ ಅವರು ಹೇಮಾವತಿ ನಾಲಾ ವಲಯದ ಅ˜ಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಇಲ್ಲಿನ ಶಾಸಕರ ಕಚೇರಿಯಲ್ಲಿ ಹೇಮಾವತಿ ನಾಲಾ ವಲಯದ ಅ˜ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರಜಾಪ್ರಗತಿಯೊಂದಿಗೆ ಮಾಹಿತಿ ನೀಡಿದ ಶಾಸಕರು, ೧೯೯೬&೨೦೧೪ರವರೆಗಿನ ಸುಮಾರು ೧೮ ವರ್ಷಗಳ ಅವ˜ಯಲ್ಲಿ ಕಳೆದ ವರ್ಷ ಅಂದರೆ ತಮ್ಮ ಅ˜ಕಾರದ ಅವ˜ಯಲ್ಲಿ ನಗರ ಪ್ರದೇಶಕ್ಕೆ .೮೯೩ ಟಿಎಂಸಿ ನೀರನ್ನು ಪಡೆಯಲಾಗಿದೆ. ಈ ಪ್ರಮಾಣವು ೧೮ ವರ್ಷಗಳ ಅವ˜ಯಲ್ಲಿಯೇ ಅತಿ ಹೆಚ್ಚಿನ ಪ್ರಮಾಣವಾಗಿದೆ. ಆದರೆ ನಗರ ಪ್ರದೇಶ ಬೆಳೆದಂತೆ ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ನಗರ ಪ್ರದೇಶದ ನೀರಿನ ಹಂಚಿಕೆಯ ಪ್ರಮಾಣವನ್ನೂ ಈವರೆಗೂ ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಈ ವರ್ಷ ಈಗಾಗಲೇ ಬುಗುಡನಹಳ್ಳಿ ಹಾಗೂ ಹೆಬ್ಬಾಕ ಕೆರೆಗಳಿಗೆ .೬೨೨ ಟಿಎಂಸಿ ನೀರು ಹರಿಸಿದ್ದು, ಜನವರಿ ಅಂತ್ಯದವರೆಗೆ ಕನಿಷ್ಠಪಕ್ಷ ಒಂದು ಟಿಎಂಸಿ ಯಷ್ಟು ನೀರನ್ನು ಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಹೇಮಾವತಿ ನಾಲಾ ವಲಯದ ಅ˜ಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ೩೫ ದಿನಗಳಲ್ಲಿ ಉಳಿಕೆ ಅಂದರೆ .೩೭೮ ಟಿಎಂಸಿ ನೀರನ್ನು ಹರಿಸುವಂತೆ ಅ˜ಕಾರಿಗಳಿಗೆ ಸೂಚಿಸಲಾಗಿದೆ. ಈ ಪ್ರಕಾರ ಅಂದರೆ ಮುಂದಿನ ೩೫ ದಿನಗಳಲ್ಲಿ ಉಳಿಕೆ .೩೭೮ ಟಿಎಂಸಿ ನೀರು ನಗರದ ಎರಡು ಕೆರೆಗಳಿಗೆ ನಿತ್ಯ ಕನಿಷ್ಠ ೧೦೦ ಕ್ಯೂಸೆಕ್‌ ನೀರನ್ನು ಹರಿಸುವಂತೆ ಅ˜ಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಅ˜ಕಾರಿಗಳ ಮಾಹಿತಿಯಂತೆ ನಗರ ಪ್ರದೇಶದ ಬುಗುಡನಹಳ್ಳಿಯಲ್ಲಿ ಮುಂದಿನ ೩೫ ದಿನಗಳಲ್ಲಿ .೩೭೮ ಟಿಎಂಸಿ ನೀರನ್ನು ಹರಿಸಿದ್ದೇ ಆದಲ್ಲಿ ಆಗಸ್ಟ್‌ ಅಂತ್ಯದವರೆಗೆ ನಿತ್ಯ ೬೦ ಎಂಎಲ್‌ಡಿ ನೀರನ್ನು ನಗರ ಪ್ರದೇಶಕ್ಕೆ ಹರಿಸಬಹುದು. ಇದರಿಂದ ಆಗಸ್ಟ್‌ವರೆಗೆ ನಗರ ಪ್ರದೇಶಕ್ಕೆ ನೀರಿನ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

No Comments to “ಆಗಸ್ಟ್‌ ಅಂತ್ಯದವರೆಗೆ ನೀರಿನ ಸಮಸ್ಯೆ ಇಲ್ಲ”

add a comment.

Leave a Reply

You must be logged in to post a comment.