ಮೂಲಭೂತ ಸೌಲಭ್ಯಗಳಿಂದ ವಂಚಿತ ಸಿದಟಛಿನಹಟ್ಟಿ

ತಾಲ್ಲೂಕಿನ ಗಡಿ ಭಾಗದ ಗೊಲ್ಲರ ಸಿದ್ದನಹಟ್ಟಿ ಗ್ರಾಮಕ್ಕೆ ರಸ್ತೆ , ಮನೆ ಸೇರಿದಂತೆ ಇನ್ನಿತರೆ ಮೂಲಸೌರ್ಕಗಳಿಲ್ಲದೆ ಅಕ್ಷರಶಃ ಮರೀಚಿಕೆಯಾಗಿ ಪರಿಣಮಿಸಿದೆ.
ತಾಲ್ಲೂಕಿನ ಕೊಂಡಜ್ಜಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿದ್ದನಹಟ್ಟಿ ಗ್ರಾಮ ಬಹುತೇಕ ಕಾಡುಗೊಲ್ಲರೇ ಇರುವ ಸುಮಾರು ಅರವತ್ತು ಮನೆಗಳ ಕುಟುಂಬಗಳು ಇವೆ. ಇಲ್ಲಿಯ ಜನರ ಪ್ರಧಾನ ಕಸುಬು ವ್ಯವಸಾಯ ಇನ್ನು ಕೆಲವರೂ ಕೂಲಿನಾಲಿ ಮಾಡಿ ಜೀವನಸಾಗಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಮಂದಿ ಅನಕ್ಷರಸ್ತರಾಗಿದ್ದು ಸರ್ಕಾರದ ಅನುಕೂಲಗಳ ಅರಿವಿಲ್ಲದೆ ಹಾಗೂ ಆಧುನಿಕ ಸಮಾಜದ ನಾಗರೀಕತೆಯ ಸೋಂಕಿಲ್ಲದೆ ಮೂಕರಾಗಿ ಬದುಕು ದೂಡುತ್ತಿದ್ದಾರೆ.
ಪಟ್ಟಣದಿಂದ ಹದಿನೆಂಟು ಕಿ.ಮೀ ದೂರವಿದ್ದು, ಗ್ರಾಮದ ಜನರ ಸಂಚಾರಕ್ಕೆಂದು ಉತ್ತಮ ರಸ್ತೆಯಿಲ್ಲ ಇರುವುದೂ ಮಣ್ಣಿನ ಕಚ್ಚ್ಕಾ ರಸ್ತೆ ಅದೂ ಕಿಷ್ಕಿಂದೆಯಂತೆ ಇದೆ. ಮಳೆಗಾಲದಲ್ಲಿ ಕಿಚಗುಡುತ್ತಾ , ಕೆಸರಿನ ರಾಡಿಯಾಗಿಬಿಡುತ್ತದೆ. ಇದರಿಂದ ಮುದುಕರು , ಮಕ್ಕಳು ಓಡಾಡಲು ತ್ರಾಸಪಡ ಬೇಕಾಗುತ್ತದೆ. ಈ ರಸ್ತೆ ಯಾವಾಗ ಡಾಂಬರ್‌ ಕಾಣುತ್ತದೊ ಎಂದು ಚಾತಕ ಪ್ಠ̈ಯಂತೆ ಕಾಯ ಬೇಕಾಗಿದೆ ಎನ್ನುತ್ತಾರೆ ಗ್ರಾಮದ ಶಿವಕುಮಾರ್‌. ಗ್ರಾಮಕ್ಕೆ ಕಣ್ಣುಹಾಯಿಸಿದರೆ ಸಾಕು ಎಲ್ಲಾ ಕಡೆ ೪೦ಕ್ಕೂ ಅ˜ಕ ಗುಡಿಸಲುಗಳು ಧುತ್ತನೆ ಗೋಚರಿಸುತ್ತವೆ. ಇಲ್ಲಿನವರು ಆರ್ಥಿಕವಾಗಿ ದುರ್ಬಲರಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಮನೆ ಕಟ್ಟಿಕೊಳ್ಳುವುದಿರಲಿ ಒಪ್ಪತ್ತಿಗೂ ಕೂಳಿಲ್ಲದೆ ಪರದಾಡುವವರಿದ್ದಾರೆ. ಈಗಿರುವಾಗ ಮನೆಕಟ್ಟಿಕೊಳ್ಳುವ ಮಾತೆಲ್ಲಿ. ಬದುಕಿಗೊಂದು ಸೂರು ಇರಲೆಂದು ಅಕ್ಕಪಕ್ಕದ ತೋಟಗಳಿಂದ ತಂದಿದ್ದ ತೆಂಗಿನಗರಿಗಳಿಂದ ಗುಡಿಸಲು ಕಟ್ಟಿಕೊಂಡಿದ್ದಾರೆ. ಅವು ಮಳೆಗಾಲದಲ್ಲಿ ಸೋರುತ್ತವೆ ರಾತ್ರಿ, ಉಳುಉಪ್ಪಟ್ಟೆಗಳ ಕಾಟ ಒಂದು ಕಡೆಯಾದರೆ ಮತ್ತೊಂದೆಡೆ ಬೇಸಿಗೆ ಕಾಲದಲ್ಲಿ ಬೆಂಕಿಯ ಭಯವಿದೆ. ಒಂದು ವೇಳೆ ಬೆಂಕಿ ಬಿದ್ದರೆ ಊರಿಗೆ ಊರೆ ಹತ್ತಿ ಉರಿದುಹೋಗುತ್ತದ

No Comments to “ಮೂಲಭೂತ ಸೌಲಭ್ಯಗಳಿಂದ ವಂಚಿತ ಸಿದಟಛಿನಹಟ್ಟಿ”

add a comment.

Leave a Reply

You must be logged in to post a comment.