ಸಚಿವ ಹೆಚ್‌.ಆಂಜನೇಯ ಪ್ರತಿಪಾದನೆ ಅಕ್ಷರ ದಾಸೋಹಕ್ಕೆ ಜಾತಿ ಲೇಪನ ಸಲ್ಲದು

ಭಾರತ ಜಾತ್ಯತೀತವಾದ ದೇಶವಾಗಿದೆ. ಇಲ್ಲಿ ಜಾತಿಯ ಸೊಂಕು ಬರಬಾರದು, ಅದರಲ್ಲೂ ಶಾಲೆಯಲ್ಲಿ ಮಕ್ಕಳಿಗೆ ಜಾತಿಯ ಲೇಪನದ ವಾಸನೆಯೂ ಸಹಾ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರಾದ್ದಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್‌. ಆಂಜನೇಯ ತಿಳಿಸಿದರು.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಸರ್ಕಾರದವತಿಯಿಂದ ನೂತನವಾಗಿ ನಿರ್ಮಾಣವಾದ ಬಿಸಿಯೂಟದ ಅಡುಗೆ ಕೋಣೆ, ಮಕ್ಕಳಿಗೆ ಸೈಕಲ್‌ ವಿತರಣೆ ಮತ್ತು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಮಕ್ಕಳಿಗೆ ಸರ್ಕಾರದವತಿಯಿಂದ ನೀಡುವ ಬಿಸಿಯೂಟವನ್ನು ತಯಾರು ಮಾಡುವವರು ಯಾವ ಜಾತಿಯವರು ಎಂಬುದನ್ನು ಸಹಾ ತಿಳಿಯದಂತೆ ಎಚ್ಚರಿಕೆಯಿಂದ ಕೆಲಸವನ್ನು ನಿರ್ವಹಿಸಬೇಕಿದೆ ಎಂದು ಆಡಳಿತ ಮಂಡಳಿಗೆ ಸೂಚನೆ ನೀಡಿದರು.
ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನ ಊಟದ ತೊಂದರೆಯಾಗಬಾರದೆಂಬ ಹಿನ್ನಲೆಯಲ್ಲಿ ಅಕ್ಷರ ದಾಸೋಹ ಎಂಬ ಹೆಸರಿನಲ್ಲಿ ಬಸಿಯೂಟವನ್ನು ನೀಡುವ ಕಾರ್ಯವನ್ನು ಆರಂಭ ಮಾಡಲಾಯಿತು. ಈ ಮಧ್ಯೆ ರಾಜ್ಯದ ಕೆಲವೆಡೆಯಲ್ಲಿ ಬಿಸಿಯೂಟವನ್ನು ಬೇರೆ ಜನಾಂಗದವರು ತಯಾರು ಮಾಡಿದರೆ ನಮ್ಮ ಮಕ್ಕಳು ಊಟ ಮಾಡುವುದಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಇದನ್ನು ಮನಗಂಡ ಸರ್ಕಾರ ಬಿಸಿಯೂಟ ತಯಾರಿಸುವವರ ಜಾತಿಯನ್ನು ಕೇಳದೆ ಎಲ್ಲರು ಇಷ್ಟ ಪಡುವಂತೆ ಜನರಿಂದ ಬಿಸಿಯೂಟವನ್ನು ತಯಾರಿಸಿ ಮಕ್ಕಳಿಗೆ ನೀಡುಲಾಗುತ್ತಿದೆ. ಸರ್ಕಾರ ನಡೆಸುತ್ತಿರುವ ಶಾಲೆ, ಅನುದಾನ ಮತ್ತು ಅನುಮತಿ ಪಡೆದು ನಡೆಸುತ್ತಿರುವ ಶಾಲೆಯಲ್ಲಿ ಬಿಸಿಯೂಟ ತಯಾರಕರ ಜಾತಿಯನ್ನು ಯಾವುದೇ ಕಾರಣಕ್ಕೂ ತಿಳಿಯದಂತೆ ಎಚ್ಚರವಹಿಸಬೇಕಿದೆ ಎಂದು ಸಚಿವರು ಸೂಚನೆ ನೀಡಿದರು.

No Comments to “ಸಚಿವ ಹೆಚ್‌.ಆಂಜನೇಯ ಪ್ರತಿಪಾದನೆ ಅಕ್ಷರ ದಾಸೋಹಕ್ಕೆ ಜಾತಿ ಲೇಪನ ಸಲ್ಲದು”

add a comment.

Leave a Reply

You must be logged in to post a comment.