ಸರ್ಕಾರಿ ಶಾಲಾ ಸಮವಸಣಉಕ್ಕೆ ಕಳಪೆ ಸೋಂಕು!

ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸಣಉ ಪೂರೈಕೆಯಾಗುತ್ತಿರುವ ಪ್ರಕರಣ ತಾಲೊಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸೋಮವಾರ ತೀವ್ರ ಚರ್ಚೆಗೆ ಗ್ರಾಸವಾಯಿತು.
ಆರಂಭದಲ್ಲಿಯೇ ವಿಷಯ ಪ್ರಸ್ತಾಪಿಸಿದ ಸದಸ್ಯ ಅಣಜಿ ಬಾಬು, ಪ್ರತಿ ಶೈಕ್ಷಣಿಕ ವರ್ಷ ಆರಂಭದಲ್ಲಿ ಶಾಲೆಗಳಿಗೆ ಬಟ್ಟೆ ಸರಬರಾಜು ಮಾಡುವ ಗುತ್ತಿಗೆದಾರರು ಕಳಪೆ ಗುಣಮಟ್ಟದ ಸಮವಸಣಉ ನೀಡಿ ಹೆಚ್ಚು ಹಣ ಪಡೆಯುತ್ತಿದ್ದಾರೆ. ಇದು ಒಂದು ಮಾμಯಾ ರೀತಿಯಲ್ಲಿ ಕೆಲಸ ನಡೆಯುತ್ತಿದೆ. ಗುತ್ತಿಗೆದಾರರು ಹಣ ಗಳಿಸುವ ಉದ್ದೇಶದಿಂದ ಶಾಲೆಗೆ ಬಟ್ಟೆ ವಿತರಿಸಲು ಪೈಪೋಟಿಮೇಲೆ ಬರುತ್ತಿದ್ದಾರೆ.ಕೆಲವರು ಕ್ಷೇತ್ರ ಶಿಕ್ಷಣಾ˜ಕಾರಿಗಳ ಸಂಬಂ˜ಕರೆಂದು ಹೆಸರು ಹೇಳಿಕೊಂಡು ಶಾಲೆಗಳಲ್ಲಿ ಟೆಂಡರ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮಧ್ಯ ಪ್ರವೇಸಿಶಿದ ಬಿಇಓ ಸಿದ್ದಪ್ಪ, ಕಡಿಮೆ ಗುಣಮಟ್ಟದ ಸಮವಸಣಉ ಸರಬರಾಜುಗೊಂಡ ಶಾಲೆಗಳನ್ನು ಪರಿಶೀಲನೆ ನಡೆಸಲಾಗುವುದು. ಸರ್ಕಾರ ಬಟ್ಟೆ ಹೊಲಿಗೆಗಾಗಿ ಪ್ರತಿ ವಿದ್ಯಾರ್ಥಿಗೂ ೨೫೦ ರೂ. ನೀಡುತ್ತದೆ ಎಂದರು.
ಕಾರ್ಯನಿರ್ವಹಣಾ˜ಕಾರಿ ಎಲ್‌.ಎಸ್‌. ಪ್ರಭುದೇವ ಮಾತನಾಡಿ, ಕಡಿಮೆ ಗುಣಮಟ್ಟ ಸಮವಸಣಉ ಸರಬರಾಜು ಮಾಡುವ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಬಿಒಓ ಗೆ ತಾಕೀತು ಮಾಡಿದರು.
ಪ್ರಭುದೇವ್‌ ಪ್ರತಿಕ್ರಿಯಿಸಿ, ಶಾಲೆಗಳಿಗೆ ನೀಡುವ ಆಹಾರ ಪದಾರ್ಥ ಕಡಿಮೆ ಸರಬ ರಾಜಾಗುತ್ತಿದೆ ಎಂಬ ದೂರಿದೆ. ಎಂದು ಅಕ್ಷರ ದಾಸೋಹ ಅ˜ಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅ˜ಕಾರಿ, ಆಹಾರ ಪದಾರ್ಥ ಲೋಪದೋಷತಡೆಯಲು ಸಿಆರ್‌ಪಿ ಅ˜ಕಾರಿತಂಡ ರಚಿಸಲಾಗಿದ್ದು, ಆಯಾ ಶಾಲಾ ಮುಖ್ಯಸ್ಥರಿಗೆ ಕಡ್ಡಾಯ ತೂಕ ತಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷಎಚ್‌.ಆರ್‌.ನಾಗರಾಜ್‌ ,ತಾಲೂಕಿನ ಹನುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೫೦ ಕೆ.ಜಿ.ತೂಕದ ಚೀಲದಲ್ಲಿ ೩೫ ಕೆ.ಜಿ.ತೊಗರಿ ಬೇಳೆ ಬಂದಿದೆ ಎಂದರು.
ಬಳಿಕ ಮಾತನಾಡಿದ ಇಓ, ಕಡ್ಡಾಯವಾಗಿತೂಕ ಮಾಡಿ ಪದಾರ್ಥ ಪಡೆಯಲು ಮತ್ತೊಂದು ಸಾರಿ ಶಾಲಾ ಮುಖ್ಯಸ್ಥರಿಗೆ ತಾಕೀತು ಮಾಡಿ. ತೂಕದಲ್ಲಿ ಲೋಪ ಎಸಗುವ ಗುತ್ತಿಗೆದಾರರನ್ನು ್ನಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.
ಸದಸ್ಯ ರುದ್ರೇಶ್‌ಗೌಡ್‌ ಮಾತನಾಡಿ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಕಟಾವಿಗೆ ಅನುಮತಿ ನೀಡಲು ವಿಳಂಬ ಮಾಡುತ್ತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತದೆ. ದರ ಬೇರೆ ಕಡಿಮೆ ಇದೆ. ಹೊರ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ನೀಡಲು ಪರವಾನಿಗೆ ನೀಡುವುದಿಲ್ಲವೆಂದು ಜಿಲ್ಲಾ˜ಕಾರಿ ಆದೇಶಿಸಿದ್ದಾರೆ ಎಂದರು. ಇದಕ್ಕೆ ದನಿಗೂಡಿಸಿದೆ ಸದಸ್ಯ ಶಿವಣ್ಣ ಹುಲಿಕಟ್ಟಿ, ಕಾರ್ಖಾನೆಗಳು ಸ್ಥಳೀಯ ರೈತರಕಬ್ಬನ್ನು ಶೇ.೭೫ ರಷ್ಟು ಖರೀದಿಸಬೇಕು.ಆದರೆ, ಶೇ.೨೫ ರಷ್ಟು ತಗೆದುಕೊಳ್ಳುತ್ತಿದ್ದಾರೆ. ಎಂದು ಆರೋಪಿಸಿದರು.
ನಕಲಿ ವೈದ್ಯರ ಮೇಲೆ ಕ್ರಿಮಿನಲ್‌ಮೊಕದ್ದಮೆ: ತಾಲೂಕಿನಲ್ಲಿ ೨೨ ನಕಲಿ ವೈದ್ಯರನ್ನು ಪತ್ತೆ ಹಚ್ಚ ಲಾಗಿದ್ದು, ಈ ಕುರಿತು ಡಿಎಚ್‌ಓಗೆ ವರದಿ ನೀಡಲಾಗಿದೆ ಎಂದರು.

No Comments to “ಸರ್ಕಾರಿ ಶಾಲಾ ಸಮವಸಣಉಕ್ಕೆ ಕಳಪೆ ಸೋಂಕು!”

add a comment.

Leave a Reply

You must be logged in to post a comment.