ಹಾಡ ಹಗಲೇ ೩ ಲಕ್ಷದಷ್ಟು ವಡವೆ ದೋಚಿದ ಕಳ್ಳರು

ಹಾಡ ಹಗಲೇ ಬೈಕ್‌ ನಲ್ಲಿ ಬಂದ ಯುವಕರಿಬ್ಬರು ಹೆಂಗಸರನ್ನು ಯಾಮಾರಿಸಿ ಸುಮಾರು ೩ ಲಕ್ಷದಷ್ಟು ವಡವೆಗಳನ್ನು ದೋಚಿದ ಘಟನೆ ಪಟ್ಟಣದ ಸುಬ್ರಹ್ಮಣ್ಯ ನಗರದ ಮುಖ್ಯ ಬೀದಿಯಲ್ಲಿ ನೆಡೆದಿದೆ. ಪಟ್ಟಣದ ಪೂನಂ ಜ್ಯೂಯಲರ್ಸ್‌ ನ ಮಾಲಿಕನಾದ ಮಿಸ್ರಿಲಾಲ್‌ ಪತ್ನಿ ಮಂಜುಳ ಹಾಗೂ ಶ್ರೀ ಮಹಾಲ್ಠ್̈ಮ ಟೆಕ್ಸಟೈಲ್ಸ್‌ ನ ಮಾಲೀಕನಾದ ಮೋತಿಲಾಲ್‌ ಪತ್ನಿ ಭವರಿದೇವಿ ವಂಚನೆಗೆ ಒಳಗಾದ ನತದೃಷ್ಠ ಹೆಂಗಸರು. ಸುಬ್ರಹ್ಮಣ್ಯ ನಗರದ ಪಿ.ಡಬ್ಯೂ.ಡಿ ಕಚೇರಿ ಮಂಭಾಗದ ಮೊದಲನೆ ಮಹಡಿಯಲ್ಲಿ ಸಹೋದರರಿಬ್ಬರು ವಾಸವಾಗಿದ್ದು ಭಾನುವಾರ ಸುಮಾರು ೧೨ ಘಂಟೆ ಸಮಯದಲ್ಲಿ ಸೂಟು&ಬೂಟು ಧರಿಸಿದ ಯುವಕರಿಬ್ಬರು ಮನೆಯಹತ್ತಿರ ಬಂದು ಹೆಂಗಸರೊಡನೆ ವಿಸಿಟಿಂಗ್‌ ಕಾರ್ಡ್‌ನೊಂದಿಗೆ ಪರಿಚಯಮಾಡಿಕೊಂಡು ನಮಗೆ ಕನ್ನಡ ಬರುವುದಿಲ್ಲ. ಕೇವಲ ಹಿಂದಿ ಮಾತ್ರ ಬರುತ್ತದೆ ಎಂದು ನಂಬಿಸಿ ನಿಮ್ಮ ಮನೆಯಲ್ಲಿರುವ ಪ್ರಿಡ್ಜ್‌, ವಾಶಿಂಗ್‌ ಮೆಶಿನ್‌ ಸೇರಿದಂತೆ ಇತರೆ ವಸ್ತುಗಳನ್ನು ಸ್ವಚ್ಚ ಮಾಡುವ ಪೌಡರ್‌ ಇದೆ ಎಂದು ನಂಬಿಸಿದ್ದಾರೆ. ಮನೆಯಲ್ಲಿ ೪&೫ ಮಂದಿ ಪೈಂಟ್‌ಮಾಡುತ್ತಿದ್ದು ಹಾಗೂ ಮನೆಯಲ್ಲಿ ೫&೬ ಮಕ್ಕಳು ಇದ್ದರೂ ಸಹಾ ಪೌಡರ್‌ ಅನ್ನು ಅವರಿಗೆ ತೋರಿಸುವ ನೆಪದಲ್ಲಿ ಅವರ ಕೈಗಳಿಗೆ ಮುಟ್ಟಿಸಿದ್ದಾರೆ. ಅವರ ಕೈಗೆ ಪೌಡರ್‌ ಅನ್ನು ಮುಟ್ಟಿಸಿದ ತಕ್ಷಣ ಮಹಿಳೆಯರಿಗೆ ಏನು ತೋಚದಂತಾಗಿ ತಮ್ಮ ಮೈಮೇಲಿದ್ದ ವಡವೆಗಳನ್ನು ಬಿಚ್ಚಿಕೊಟ್ಟಿದ್ದಾರೆ. ತಕ್ಷಣ ಯುವಕರು ಜಾಗ ಖಾಲಿಮಾಡಿದ್ದು, ೫ ನಿಮಿಷದ ನಂತರ ಸ್ಥಿಮಿತಕ್ಕೆ ಬಂದ ಮಹಿಳೆಯರು ಹೊರ ಬಂದು ನೋಡಿದಾಗ ಯುವಕರು ಪರಾರಿಯಾಗಿರುವುದು ತಿಳಿದು ಅಕ್ಕ&ಪಕ್ಕದವರಿಗೆ ವಿಷಯ ತಿಳಿಸಿದರು ಏನೂ ಪ್ರಯೋಜನವಾಗಿಲ್ಲ. ಎಸ್‌.ಐ. ಸುರೇಶ್‌ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಾಡುಹಗಲೆ ನಡೆದ ಘಟನೆಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ.

No Comments to “ಹಾಡ ಹಗಲೇ ೩ ಲಕ್ಷದಷ್ಟು ವಡವೆ ದೋಚಿದ ಕಳ್ಳರು”

add a comment.

Leave a Reply

You must be logged in to post a comment.