ಸಹಕಾರ ಕ್ಷೇತ್ರದ ಉಳಿವಿಗೆ ನಂಬಿಕೆ, ವಿಶ್ವಾಸ ಅಗತ್ಯ

ಯಾವುದೇ ಸಹಕಾರ ಸಂಘಗಳು ಯಶಸ್ವಿಯಾಗಿ ಮುನ್ನಡೆಯಲು ಹಾಗೂ ಗಟ್ಟಿಯಾಗಿ ನೆಲೆಯೂರಲು ನಂಬಿಕೆ ಹಾಗೂ ವಿಶ್ವಾಸ ಅತಿ ಮುಖ್ಯವಾಗುತ್ತದೆ ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಕ್ಯಾತಸಂದ್ರದ ಸರ್ಕಾರಿ ಶಾಲಾ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿ. ಲ್ಠ್̈ಮನರಸಿಂಹಯ್ಯನವರ ಸ್ಮರಣಾರ್ಥ ಕೆಸರುಮಡುರಸ್ತೆ ರಿಂಗ್‌ರೋಡ್‌ ನಡುವೆ ತಂಗುದಾಣ ಉದ್ಘಾಟನೆ, ಸಂಘದ ೨ನೇ ನೂತನ ಶಾಖೆ ಉದ್ಘಾಟನೆ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಹಕಾರ ಸಂಘಗಳು ಸಮಾಜದ ಅಭಿವೃದಿಟಛಿಯಲ್ಲಿ ತಪ್ಪದೇ ಆದ ಪಾತ್ರವನ್ನು ವಹಿಸುತ್ತಿವೆ. ಎಲ್ಲ ವರ್ಗದ ಜನರಿಗೂ ಸಾಲಸೌಲಭ್ಯಗಳನ್ನು ಕಲ್ಪಿಸಿ, ಶೇ.೯೮ರಷ್ಟು ಸಾಲ ವಸೂಲಾತಿ ಹೊಂದಿರುವ ಈ ಸಹಕಾರ ಸಂಘವು ದಿ.ಲ್ಠ್̈ಮನರಸಿಂಹಯ್ಯ, ಕೆಎನ್‌ಆರ್‌ ಅವರಂತಹ ಮಾಗದರ್ಶನದಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು. ೧೯೯೬ರಲ್ಲಿ ಪ್ರಾರಂಭವಾದ ಈ ಸಂಘವು ಮೂರು ಸಾವಿರ ಸದಸ್ಯರೊಂದಿಗೆ ೨೩ ಕೋಟಿ ಬಂಡವಾಳ ಹೊಂದಿದ್ದು, ಇದರಲ್ಲಿ ೧೯ ಕೋಟಿ ರೂ.ಗಳ ಸಾಲ ವಿತರಣೆ ಮಾಡಿರುವುದು ಹೆಮ್ಮೆಯವಿಚಾರ. ಅಲ್ಲದೆ ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ ಸನ್ಮಾನಿಸುತ್ತಿರುವ ಈ ಸಂಘವು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರ ಮಕ್ಕಳನ್ನು ಗುರ್ತಿಸಿ ಅವರಿಗೆ ಶಿಕ್ಷಣ ಕೊಡಿಸುವಂತಹ ಕೆಲಸಗಳನ್ನು ಮಾಡುವಂತೆ ಮನವಿ ಮಾಡಿದರು. ಕನ್ನಡ ಅಭಿವೃದಿಟಛಿ ಪ್ರಾ˜ಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡುತ್ತಾ, ಬಹುತೇಕ ಸಂಘ ಸಂಸ್ಥೆಗಳಲ್ಲಿ ಮೋಸ, ವಂಚನೆ, ಲೂಟಿ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿಯೂ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ ತನ್ನ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಬಂದಿದೆ. ಅಲ್ಲದೆ ದಿ. ಲ್ಠ್̈ಮನರಸಿಂಹಯ್ಯ ಅವರ ಸ್ಮರಣಾರ್ಥ ತಂಗುದಾಣವನ್ನೂ ನಿರ್ಮಿಸುವ ಮೂಲಕ ಸಮಾಜ ಸೇವೆಯನ್ನು ಸಮಾಜಕ್ಕೇ ತೋರ್ಪಡಿಸಿದೆ ಎಂದರು. ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯವಸ್ಥೆ ಬಹುತೇಕ ಕಲುಷಿತಗೊಳ್ಳುತ್ತಿದೆ. ಈ ನಡುವೆಯೂ ಪ್ರಾಮಾಣಿಕ ಹಾಗೂ ನಿಷ್ಠುರ ರಾಜಕಾರಣಿಗಳಾದ ಸಂಸದ ಎಸ್‌ .ಪಿ.ಮುದ್ದಹನುಮೇಗೌಡರು ಹಾಗೂ ಶಾಸಕರಾದ ಕೆ.ಎನ್‌.ರಾಜಣ್ಣ ಅವರನ್ನು ಹೊಂದಿರುವ ಜಿಲ್ಲೆಯ ಜನತೆ ಧನ್ಯರು ಎಂದು ತಿಳಿಸಿದರು.

No Comments to “ಸಹಕಾರ ಕ್ಷೇತ್ರದ ಉಳಿವಿಗೆ ನಂಬಿಕೆ, ವಿಶ್ವಾಸ ಅಗತ್ಯ”

add a comment.

Leave a Reply

You must be logged in to post a comment.