ಅಧಿಕಾರಿಗಳ ಸಮ್ಮುಖದಲ್ಲಿ ಮೃತನ ಶವಸಂಸ್ಕಾರ

ತುಮಕೂರು ಶನಿವಾರ ಸಂಜೆಯಿಂದ ಉದ್ವಿಗ್ನಗೊಂಡಿದ್ದ ಕಟ್ಟಿಗೇನಹಳ್ಳಿಯ ಮೃತ ಶಿವಕುಮಾರ್‌ ಅವರ ಶವಸಂಸ್ಕಾರದ ವಿವಾದ ಭಾನುವಾರ ಸಂಜೆಯ ವೇಳೆಗೆ ಅಂತ್ಯಕ್ರಿಯೆ ನೆರವೇರಿಸುವುದರೊಂದಿಗೆ ತಾತ್ಕಾಲಿಕ ಅಂತ್ಯ ಕಂಡಿತು. ಶನಿವಾರ ರಾತ್ರಿ ಗ್ರಾಮದಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ನಡೆದಿದ್ದ ಘರ್ಷಣೆ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ˜ಕಾರಿಗಳು ಬರುವವರೆಗೂ ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಕಟ್ಟಿಗೇನಹಳ್ಳಿ ಗ್ರಾಮಸ್ಥರು ಭಾನುವಾರ ಪಟ್ಟು ಹಿಡಿದಿದ್ದರು. ಆದರೆ ಸಂಜೆಯ ವೇಳೆಗೆ ಗ್ರಾಮಸ್ಥರ ಆಕ್ರೋಶದ ಕಾವು ತಣ್ಣಗಾಗಿ ಅ˜ಕಾರಿಗಳ ಸಂಧಾನದೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಸಂಜೆ ೬.೩೦ ರ ವೇಳೆಗೆ ಕಟ್ಟಿಗೇನಹಳ್ಳಿಗೆ ಎಎಸ್ಪಿಗಳಾದ ಲಕ್ಷ್ಮಣ್‌, ತಿಪಟೂರಿನ ಪ್ರಭಾರ ಎಎಸ್ಪಿ ಕಾರ್ತೀಕ್‌ರೆಡ್ಡಿ, ಉಪವಿಭಾಗಾ˜ಕಾರಿ ಆನಂದ್‌ ಅವರ ನೇತೃತ್ವದಲ್ಲಿ ಅ˜ಕಾರಿಗಳ ತಂಡ ಭೇಟಿ ಕೊಟ್ಟಿತು. ಶಾಲಾ ಮುಂಭಾಗದಲ್ಲಿ ಸಭೆ ಸೇರಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಾಯಿತು. ಈ ವೇಳೆಗಾಗಲೇ ಗ್ರಾಮದ ಬಹುತೇಕ ಮುಖಂಡರು ಅಲ್ಲಿ ಹಾಜರಿರಲಿಲ್ಲ. ಕೆಲವೇ ಮಂದಿ ಅಲ್ಲಿದ್ದು, ಅವರೊಂದಿಗೆ ಮಾತನಾಡಿದ ಅ˜ಕಾರಿಗಳು ಮೃತನ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಆತನ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ಬೇಡಿಕೆಯನ್ನು ಸಂಬಂಧಪಟ್ಟ ಅ˜ಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್‌ ವರಿಷ್ಠಾ˜ಕಾರಿ ಲಕ್ಷ್ಮಣ್‌ ಮೃತನ ಶವ ಸಂಸ್ಕಾರದ ವಿಷಯ ಎಲ್ಲವೂ ಶನಿವಾರವೇ ತುಮಕೂರಿನಲ್ಲಿಯೇ ಶಾಂತಿಯುತವಾಗಿ ಇತ್ಯರ್ಥಗೊಂಡಿತ್ತು. ಆದರೂ ಗ್ರಾಮ ಕ್ಕೆ ಬಂದಾಗ ಪೊಲೀಸ್‌ ಅ˜ಕಾರಿಗಳ ಮೇಲೆ ಹಲ್ಲೆ ನಡೆಸಿದ್ದು ವಿಷಾದನೀಯ. ಇಲ್ಲಿಯವರೆಗೂ ನಿಮ್ಮ ಪ್ರತಿಭಟನೆಗಳ ಸಂದರ್ಭದಲ್ಲಿ ನಾವು ನಿಮ್ಮ ವಿರುದಟಛಿ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ನಿಮ್ಮ ಪ್ರತಿಭಟನೆಗಳನ್ನು ಶಾಂತಿಯಿಂದಲೇ ವ್ಠೀ̈ಸುತ್ತಾ ಬಂದಿದ್ದೇವೆ. ಶಾಂತಿ ಸುವ್ಯವಸ್ಥೆಯನ್ನಷ್ಟೇ ನಾವು ಪಾಲಿಸುತ್ತಿದ್ದೇವೆ. ಕಸ ವಿಲೇವಾರಿ ಘಟಕದ ವಿಷಯದ ಬಗ್ಗೆ ತಾವುಗಳು ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಆದರೆ ಶವವನ್ನು ಮುಂದಿಟ್ಟುಕೊಂಡು ಹೆಚ್ಚಿನ ಕಾಲವನ್ನು ವ್ಯಯ ಮಾಡುವುದು ಬೇಡ. ಮುಂದಿನ ಪ್ರಕ್ರಿಯೆಗೆ ಸಹಕರಿಸಿ ಎಂದು ಮನವಿ ವ  ೂ ಡಿ ಕ ೆ ೂ ಂ ಡ  ರ  ು . ಜಿ ಲ ಾ ್ಲ ಡ  ಳಿ ತ  ದ ಪರವಾಗಿ ತೆರಳಿದ್ದ ಉಪವಿಭಾಗಾ˜ಕಾರಿ ಆನಂದ್‌ ಮಾತನಾಡಿ ಮೃತನ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ವಿಷಯಕ್ಕೆ ಸಂಬಂ˜ಸಿದಂತೆ ಜಿಲ್ಲಾ˜ಕಾರಿಗಳು ಹಾಗೂ ಸಂಬಂಧಪಟ್ಟ ಅ˜ಕಾರಿಗಳೊಂದಿಗೆ ಚರ್ಚಿಸುತ್ತೇವೆ. ಈ ಸಮಯದಲ್ಲಿ ನಾವೇ ಅದನ್ನು ಇತ್ಯರ್ಥಪಡಿಸಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುಂದಿನ ಕಾರ್ಯಕ್ಕೆ ಅನುವು ಮಾಡಿ ಕೊಡಿ. ಸರ್ಕಾರದಿಂದ ಬರಬಹುದಾದ ಪರಿಹಾರದ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ಈ ಬಗ್ಗೆ ಅ˜ಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದರು. ಸ್ಥಳದಲ್ಲೇ ಇದ್ದ ರೈತ ಸಂಘದ ಮು ಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಸಹ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಮುಂದಿನ ಕೆಲಸ ಕಾರ್ಯಗಳಿಗೆ ಅನುವು ಮಾಡಿಕೊಡುವುದು ಸೂಕ್ತ ಎಂದರು. ಶವ ಸಂಸ್ಕಾರಕ್ಕೆ ಒಪ್ಪಿಗೆ ದೊರಕಿದ ನಂತರ ರಾತ್ರಿ ೭.೩೦ರ ವೇಳೆಗೆ ಮೃತನ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮೊದಲು ಮೃತನ ಆತ್ಮಕ್ಕೆ ಶ್ರದಾಟಛಿಂಜಲಿ ಸಲ್ಲಿಸಲಾಯಿತು. ಶನಿವಾರ ರಾತ್ರಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ತುಮ ಕೂರು ಪೊಲೀಸರು ಮಾತ್ರವಲ್ಲದೆ, ಹೊರಗಿನಿಂದ ಪೊಲೀಸ್‌ ಸಿಬ್ಬಂದಿಯನ್ನು ಕರೆಯಿಸಿಕೊಂಡು ಕಟ್ಟಿಗೇನಹಳ್ಳಿಗೆ ಹೋಗುವ ರಸ್ತೆಯಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

No Comments to “ಅಧಿಕಾರಿಗಳ ಸಮ್ಮುಖದಲ್ಲಿ ಮೃತನ ಶವಸಂಸ್ಕಾರ”

add a comment.

Leave a Reply