ಬಸ್‌ ಪ್ರಯಾಣದರ ತಗ್ಗಿಸಲು ಸರ್ಕಾರದ ನಿರ್ಧಾರ

ದ ನಿರ್ಧಾರ ಬೆಳಗಾವಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣದರ ತಗ್ಗಿಸಲು ಸರ್ಕಾರ ನಿರ್ಧರಿಸಿದೆ. ಪ್ರತಿ ಸ್ಟೇಜ್‌ಗೆ ೧&೨ ರೂ ದರ ಇಳಿಕೆಯಾಗುವ ಸಂಭವವಿದೆ. ಅ˜ವೇಶನ ಮುಗಿಯುವುದರೊಳಗೆ ದರ ಇಳಿಕೆ ಕುರಿತು ಘೊಷಣೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಡೀಸೆಲ್‌ ದರ ಇಳಿಕೆಯಿಂದ ೧೪೫ ಕೋಟಿರೂ. ಉಳಿತಾಯವಾಗಲಿದ್ದು, ಕಾರ್ಮಿಕರ ಸ್ಟೈ¶ಂಡ್‌ ಮತ್ತಿತರ ಖರ್ಚು ೧೩೦ ಕೋಟಿರೂ ಆಗಲಿದೆ. ಹೆಚ್ಚುವರಿ ಉಳಿಯುವ ೧೫ ಕೋಟಿರೂ. ಸರಿದೂಗಿಸಲು ದರ ಇಳಿಕೆ ಮಾಡಲಾಗುವುದು ಎಂದರು. ವಿಧಾನ ಪರಿಷತ್‌ನಲ್ಲಿ ಕೊಟ್ಟ ಭರವಸೆ ಉಳಿಸಿಕೊಳ್ಳಲು ಸರ್ಕಾರ ಮುಂದಾಗಿದೆ, ಡೀಸೆಲ್‌ ದರ ೨ ರೂ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣದರವನ್ನು ಪ್ರತಿ ಸ್ಟೇಜ್‌ಗೆ ೧ರಿಂದ ೨ ರೂ ಇಳಿಸಲು ನಿರ್ಧರಿಸಲಾಗಿದೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅ˜ವೇಶನ ಮುಗಿಯುವುದರೊಳಗೆ ಬಸ್‌ ಪ್ರಯಾಣದರ ಇಳಿಸುವುದಾಗಿ ಸ್ಪಷ್ಟಪಡಿಸಿದರು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿರುವುದರಿಂದ ರಾಜ್ಯರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ ಪ್ರಯಾಣದರವನ್ನು ಇಳಿಸಲಾಗುತ್ತಿದೆ. ಈಗಾಗಲೇ ಸಂಬಂಧಪಟ್ಟ ಅ˜ಕಾರಿಗಳಿಗೆ ಲಾಭ ಮತ್ತು ನಷ್ಟದ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಆನಂತರ ಬಸ್‌ ಪ್ರಯಾಣ ದರ ಇಳಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಕಳೆದ ೬ ತಿಂಗಳಿಂದ ಪೆಟ್ರೋಲ್‌ ಮತ್ತು ಡೀಸಲ್‌ ದರ ೬ ಭಾರಿ ಇಳಿಕೆಯಾಗಿದೆ. ೧೫ತಿಂಗಳು ಹಿಂದಿನ ದರ ಈಗ ಇದೆ. ಆದರೂ ಸರ್ಕಾರ ಬಸ್ಸ್‌ ಪ್ರಯಾಣದರ ಇಳಿಸಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚಳಿಗಾಲದ ಅ˜ವೇಶನ ಮುಗಿಯುವುದರೊಳಗೆ ಅಥವಾ ಜನವರಿ ವೇಳೆಗೆ ದರ ಇಳಿಕೆ ಮಾಡುತ್ತೇವೆ ಎಂದು ಹೇಳಿದರು.

No Comments to “ಬಸ್‌ ಪ್ರಯಾಣದರ ತಗ್ಗಿಸಲು ಸರ್ಕಾರದ ನಿರ್ಧಾರ”

add a comment.

Leave a Reply

You must be logged in to post a comment.