ಆರೋಗ್ಯ ಸೇವೆ ಖಾಸಗೀಕರಣ ಸಲ್ಲದು: ಮಠಪತಿ

ತುಮಕೂರು – ಸರ್ಕಾರಿ ಆಸ್ಪತ್ರೆ, ಆರೋಗ್ಯ ಇಲಾಖೆ ಇದ್ದರೂ ಸರ್ಕಾರ ಮಾತ್ರ ಆರೋಗ್ಯ ಸೇವೆಯನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದ್ದು, ಅದನ್ನು ಎಲ್ಲ ಸರ್ಕಾರಿ ವೈದ್ಯರು ತಡೆಯಬೇಕಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಕರೆ ನೀಡಿದರು. ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ರಾಷ್ಟ್ರೀಯ ನೇತ್ರಾ˜ಕಾರಿಗಳ ಸಂಘ, ಐವಿಐ ಹಾಗೂ ಎನ್‌ವಿಜಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ನೇತ್ರಾ˜ ಕಾರಿಗಳ ಕೌಶಲ್ಯಾಭಿವೃದಿಟಛಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆ, ಆರೋಗ್ಯ ಇಲಾಖೆ ಇದ್ದರೂ ಸರ್ಕಾರ ಮಾತ್ರ ಆರೋಗ್ಯ ಸೇವೆಯನ್ನು ಖಾಸಗಿಯವರಿಗೆ ನೀಡಲು ಮುಂದಾಗುತ್ತಿದೆ. ಒಂದು ವೇಳೆ ಸರ್ಕಾರ ಆರೋಗ್ಯ ಸೇವೆಯನ್ನು ಖಾಸಗಿಯವರಿಗೆ ನೀಡಿದರೆ, ಬಡವರು, ನಿರ್ಗತಿಕರಿಗೆ ಸೂಕ್ತ ಆರೋಗ್ಯ ಸೇವೆ ಲಭಿಸುವುದಿಲ್ಲ. ಹಾಗಾಗಿ ಎಲ್ಲ ಸರ್ಕಾರಿ ವೈದ್ಯರು ತಮ್ಮ ಸಾಮರ್ಥ್ಯವನ್ನು ವೃದಿಟಛಿಸಿಕೊಂಡು ಅ˜ಕಾರದ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದರು. ರಾಷ್ಟ್ರೀಯ ನೇತ್ರಾ˜ಕಾರಿಗಳ ಸಂಘವು ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ನೇತ್ರಾ˜ಕಾರಿಗಳಿಗೆ ಮೂರು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಿದ್ದು, ಇಂದಿನ ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡು ಅದನ್ನು ಜನಸಾಮಾನ್ಯರಿಗೂ ತಿಳಿಸುವಂತೆ ಮಾಡಿದಾಗ ಮಾತ್ರ ಕಾರ್ಯಾಗಾರದ ಉದ್ದೇಶ ಸಾರ್ಥಕವಾಗುತ್ತದೆ. ಇಂತಹ ಕಾರ್ಯಾಗಾರಗಳು ಪ್ರತಿ ಜಿಲ್ಲೆಗಳಲ್ಲಿಯೂ ನಡೆಯಬೇಕಿದೆ ಎಂದರು. ಕಡಿಮೆ ಸಂಬಳ: ಅನ್ಯ ರಾಜ್ಯಗಳ ವೈದ್ಯರುಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ವೈದ್ಯರುಗಳಿಗೆ ನೀಡಲಾಗುತ್ತಿರುವ ಸಂಬಳ ಬಹಳ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿನಿ˜ಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದ ಅವರು, ವೈದ್ಯರ ಸಮಸ್ಯೆಗಳ ಈಡೇರಿಕೆಗೆ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕೇ ಹೊರತು, ಜನಪ್ರತಿನಿ˜ಗಳನ್ನು ಕರೆದು ಅವರು ಬೆಳ್ಳಿ ಕಿರೀಟ, ಬೆಳ್ಳಿಗಧೆಗಳನ್ನು ನೀಡಿ ಸನ್ಮಾನಿಸುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯ ಎಂದವರು ತಿಳಿಸಿದರು. ಜಿಲ್ಲಾ ಶಸಣಉಚಿಕಿತ್ಸಕ ಡಾ.ಈಶ್ವರಯ್ಯ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ನೇತ್ರವೈದ್ಯಾ˜ಕಾರಿಗಳು ಇಂದಿನ ಕೌಶಲ್ಯ ಅಭಿವೃದಿಟಛಿ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ರಾಜ್ಯ ಸರ್ಕಾರಿ ನೇತ್ರಾ˜ಕಾರಿಗಳ ಸಂಘದ ಉಪಾಧ್ಯಕ್ಷ ಎಂ.ವೆಂಕಟೇಶ್‌ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಕಾರ್ಯಾ ಗಾರದಲ್ಲಿ ಹೊಸ ಹೊಸ ಸಂಶೋಧನೆ, ತಂತ್ರಜ್ಞಾನಗಳನ್ನು ನೇತ್ರವೈದ್ಯರು ಯಾವ ರೀತಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ತರಬೇತಿ ನೀಡುತ್ತಿದ್ದು ಅದನ್ನು ಎಲ್ಲರೂ ಸದ್ಬಳಕೆ ಮಾಡಿ ಕೊಳ್ಳುವಂತೆ ಸಲಹೆ ನೀಡಿದರು. ಸಮಾರಂಭದಲ್ಲಿ ನರಸಿಂಹಮೂರ್ತಿ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

No Comments to “ಆರೋಗ್ಯ ಸೇವೆ ಖಾಸಗೀಕರಣ ಸಲ್ಲದು: ಮಠಪತಿ”

add a comment.

Leave a Reply