ವಿದ್ಯಾ ಸಂಸ್ಥೆಗಳಿಗೆ ಬಿಗಿ ಸುರಕ್ಷತಾ ಕ್ರಮ

ನವದೆಹಲಿ – ಪಾಕಿಸ್ತಾನದ ಪೇಷಾವರದ ಶಾಲೆಯೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿಎಲ್ಲರಾಜ್ಯ ಸರ್ಕಾರಗಳು ಸುರಕ್ಷತಾ ಕ್ರಮಗಳನ್ನುವಿಶೇಷವಾಗಿ ವಿದ್ಯಾ ಸಂಸ್ಥೆಗಳಲ್ಲಿ ಬಿಗಿಗೊಳಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಗೃಹ ಸಚಿವರಾಜನಾಥ್‌ ಸಿಂಗ್‌ ಸಂಸತ್‌ ಭವನದ ಹೊರಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.ಈ ಬಗ್ಗೆ ಗೃಹ ಸಚಿವಾಲಯ ವಿವರವಾದ ಮಾರ್ಗದರ್ಶನ ಸೂತ್ರಗಳನ್ನು ನೀಡಿದ್ದು ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಶಾಲಾ ಮಕ್ಕಳು ತಪ್ಪಿಸಿಕೊಳ್ಳಲು ಯಾವರೀತಿಯೋಜಿಸಬೇಕು, ಒತ್ತೆ ಪ್ರಕರಣಗಳಿಗೆ ಹೇಗೆ ಒಳಗಾಗದಿರಬೇಕು ಹಾಗೂ ತುರ್ತು ಸಂದರ್ಭಗಳಲ್ಲಿ ಹೇಗೆ ನೆರವು ಪಡೆಯಬೇಕು ಎಂಬ ಬಗ್ಗೆವಿವರ ನೀಡಿದೆ. ಕೆಲ ಶಾಲೆಗಳಿಗೆ ಈ ಬಗ್ಗೆ ಪ್ರತ್ಯೇಕವಾಗಿ ವಿಶೇಷ ಸೂಚನೆ ನೀಡುವುದಾಗಿಯೂ ಗೃಹ ಸಚಿವಾಲಯ ತಿಳಿಸಿದೆ. ಕಾನೂನು ವಿರೋ˜ ಚಟುವಟಿಕೆಗಳ ತಡೆಕಾಯ್ದೆಅನ್ವಯ ಐಎಸ್‌ಐಎಸ್‌ ಭಯೋತ್ಪಾದಕ ಸಂಘಟನೆಯ ಮೇಲೆ ದೇಶದಾದ್ಯಂತ ನಿಷೇಧ ಹೇರಲಾಗಿದೆ. ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.ಈ ಸಂಬಂಧ ಅಲ್ಪಸಂಖ್ಯಾತ ಸಮುದಾಯದ ಯಾವುದೇ ಮುಗಟಛಿ ವ್ಯಕ್ತಿಯನ್ನು ಬಂ˜ಸಲಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

No Comments to “ವಿದ್ಯಾ ಸಂಸ್ಥೆಗಳಿಗೆ ಬಿಗಿ ಸುರಕ್ಷತಾ ಕ್ರಮ”

add a comment.

Leave a Reply

You must be logged in to post a comment.