ಕುಣಿಗಲ್‌ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹೀ.ಚಿ.ಬೋರಲಿಂಗಯ್ಯ

ತಾಲ್ಲೂಕಿನಲ್ಲಿ ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಡಾ. ಹೀ.ಚಿ.ಬೋರಲಿಂಗಯ್ಯ ನವರ ಅಧ್ಯಕ್ಷತೆಯಲ್ಲಿ ೨೦೧೫ ಜನವರಿ ೧೬ರಂದು ವೈಭವಯುತವಾಗಿ ನಡೆಸಲಾಗುವುದೆಂದು ತಾಲ್ಲೂಕು ಕಸಾಪ ಅಧ್ಯಕ್ಷ ದಿನೇಶ್‌ಕುಮಾರ್‌ ತಿಳಿಸಿದರು.
ಅವರು ಪಟ್ಟಣದ ಜಿಕೆಬಿಎಂಎಸ್‌ನ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೧೯೯೩ರಲ್ಲಿ ತಗಡೂರು ವೀರಭದ್ರಪ್ಪ ಅವರು ತಾಲ್ಲೂಕು ಕಸಾಪದ ಅಧ್ಯಕ್ಷರಾಗಿದ್ದಾಗ ಸಾಹಿತಿ ಬೀಚನಹಳ್ಳಿ ಕರಿಗೌಡ ಸಮ್ಮೇಳನಾಧ್ಯಕ್ಷತೆಯಲ್ಲಿ ಮೊದಲನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಅದಾದ ನಂತರ ತಾಲ್ಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶವೇ ಸಿಕ್ಕದಂತಾಗಿತ್ತು. ೨೩ ವರ್ಷಗಳ ನಂತರ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತಾಲ್ಲೂಕು ಕಸಾಪ ಬದ್ದವಾಗಿದೆ. ಈ ನಿಟ್ಟಿನಲ್ಲಿ ೨೦೧೫ರ ಜನವರಿ ೧೬ರಂದು ದಿನಾಂಕ ನಿಗದಿ ಪಡಿಸಲಾಗಿದೆ. ಸಮ್ಮೇಳನಾಧ್ಯಕ್ಷರನ್ನಾಗಿ ತಾಲೂಕಿನವರೇ ಆದ ಹಂಪಿ ಉಪಕುಲಪತಿಗಳಾಗಿರುವ ಡಾ. ಹೀ.ಚಿ.ಬೋರಲಿಂಗಯ್ಯ ಅವರನ್ನು ಆಯ್ಕೆ ಮಾಡಿ ಆಹ್ವಾನಿಸಲಾಗಿದೆ. ಸಮ್ಮೇಳನದಲ್ಲಿ ಮೆರವಣಿಗೆ, ಉದ್ಘಾಟನೆ, ಗೋಷ್ಠಿಗಳು, ಸಾಂಸ್ಕೃತಿಕ ಸಮಾರಂಭ, ತಾಲ್ಲೂಕಿನ ವಿವಿಧ ಕಲೆಗಳ ಪ್ರದರ್ಶನ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿರುವ ತಾಲ್ಲೂಕಿನ ಪ್ರತಿಭಾವಂತರಿಗೆ ಗೌರವಾರ್ಪಣೆ, ತಾಲ್ಲೂಕಿನ ಹಲವು ಸಾಹಿತಿಗಳು ರಚಿಸಿರುವ ಪುಸ್ತಕಗಳ ಬಿಡುಗಡೆ, ತಾಲ್ಲೂಕಿನ ಸಾಹಿತ್ಯ, ಸಂಸ್ಕೃತಿ, ಕಲಾ ವೈವಿಧ್ಯತೆ, ಇತಿಹಾಸ ಹಾಗೂ ಕುಣಿಗಲ್‌ ತಾಲ್ಲೂಕು ನಾಡಿಗೆ ನೀಡಿರುವ ಕೊಡುಗೆಯ ಇತ್ಯಾದಿಗಳನ್ನು ಸಮ್ಮೇಳನದಲ್ಲಿ ಸಾದರ ಪಡಿಸುವ ಮೂಲಕ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನ ನಡೆಸಲು ಸಿದಟಛಿತೆ ಮಾಡಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲ್ಲೂಕಿನ ಸಮಸ್ತ ಜನತೆ ಸಹಕಾರ ನೀಡುವ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಕಸಾಪ ಮಾಜಿ ಕಾರ್ಯದರ್ಶಿ ರಾಧಕೃಷ್ಣ, ಹಾಲಿ ಕಾರ್ಯದರ್ಶಿಗಳಾದ ಎಸ್‌.ಆರ್‌.ಚಿಕ್ಕಣ್ಣ, ಸಿದ್ದಲಿಂಗಸ್ವಾಮಿ, ಮುಖಂಡರಾದ ಮಡಕೆಹಳ್ಳಿ ಶಿವಣ್ಣ ಮುಂತಾದವರು ಹಾಜರಿದ್ದರು.

No Comments to “ಕುಣಿಗಲ್‌ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹೀ.ಚಿ.ಬೋರಲಿಂಗಯ್ಯ”

add a comment.

Leave a Reply

You must be logged in to post a comment.