ಫುಟ್ ಪಾತ್‌ ಅಂಗಡಿಗಳ ತೆರವಿಗೆ ಚಾಲನ

ಪಾವಗಡ
ಪೆನುಕೊಂಡ ರಸ್ತೆಯ ಟೋಲ್‌ಗೇಟ್‌ನಿಂದ ಬೆಸ್ಕಾಂ ಕಛೇರಿಯವರೆಗೂ ಸುಮಾರು ನೂರಕ್ಕೂ ಅ˜ಕ ಪೆಟ್ಟಿಗೆ ಮತ್ತು ಗೂಡಂಗಡಿಗಳು, ಸಣ್ಣಪುಟ್ಟ ವ್ಯಾಪಾರಸ್ಥರ ಹೋಟೆಲ್‌, ಚಿಲ್ಲರೆಅಂಗಡಿ, ಬೀಡಾಅಂಗಡಿ,ಕ್ಷೌರದ ಅಂಗಡಿ, ಟೀ ಅಂಗಡಿ, ಇಸಿಣಉಪೆಟ್ಟಿಗೆ ಅಂಗಡಿ, ಬೊಂಡಾಅಂಗಡಿ, ಚಿಕನ್‌ ಅಂಗಡಿ, ಮಟನ್‌ ಅಂಗಡಿಗಳು ಕಳೆದ ೨೦ ವರ್ಷಗಳಿಂದ ಈ ರಸ್ತೆಯ ಮಾರ್ಗದ ಫುಟ್‌ ಪಾತ್‌ನಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು, ಆದರೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಪುರಸಭೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ತೆರವುಕಾರ್ಯಾಚರಣೆ ನಡೆಸಲಾಯಿತು.
ಭಾನುವಾರ ಬೆಳಿಗ್ಗೆ ೭ ಗಂಟೆಗೆ ಪುರಸಭೆಯ ಮುಖ್ಯಾ˜ಕಾರಿ ರಂಗಸ್ವಾಮಯ್ಯ, ಆರೋಗ್ಯ ನಿರೀಕ್ಷಕರಾದ ಷಂಷುದ್ದೀನ್‌, ರವಿಕುಮಾರ್‌ ಮತ್ತು ೨೦ ಪೌರಕಾರ್ಮಿಕರು ಮತ್ತು ಸಿ.ಪಿ.ಐ.ಭಾನುಪ್ರಸಾದ್‌, ಎಸ್‌.ಐ. ಮಂಜುನಾಥ್‌ ಹೂಗಾರ್‌ ಮತ್ತು ೨೦ ಪೊಲೀಸ್‌ ಪೇದೆಗಳು ಹಾಜರಿದ್ದು, ಎರಡು ಜೆ.ಸಿ.ಬಿ.ಯಂತ್ರಗಳು ಮತ್ತು ಟ್ರ್ಯಾಕ್ಟರ್‌ ಗಳ ಸಹಾಯದಿಂದ ಕಾರ್ಯಾಚರಣೆಯಲ್ಲಿ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ತೆರವುಗೊಳಿಸಲು ಜಿಲ್ಲಾ˜ಕಾರಿಗಳ ಸೂಚನೆ:
¶ುಟ್‌ಪಾತ್‌ ವ್ಯವಸ್ಥೆ ಇಲ್ಲದ ಕಾರಣ ಪಾದಚಾರಿಗಳಿಗೆ ಸುಗಮವಾಗಿ ಸಂಚಾರಮಾಡಲು ಜಾಗದ ಕೊರತೆಯಿಂದ ರಸ್ತೆಯಲ್ಲಿ ಸಂಚರಿಸಬೇಕಾಗಿತ್ತು, ವಾಹನಗಳು ಮತ್ತು ಪಾದಚಾರಿಗಳ ನಡುವೆ ಅಪಘಾತಗಳಾಗುತ್ತಿದ್ದವು, ಕಳೆದ ೩ ತಿಂಗಳ ಹಿಂದೆ ಆದರ್ಶಶಾಲೆಯ ಪಲ್ಲವಿ ಎಂಬ ವಿದ್ಯಾರ್ಥಿನಿ ಸೈಕಲ್‌ನಿಂದ ಟ್ಯೂಷನ್‌ಗೆ ಹೋಗುವಾಗ ಐಷರ್‌ ವಾಹನ ಡಿಕ್ಕಿಹೊಡೆದು ಸಾವನ್ನಪ್ಪಿದ್ದಳು, ಈ ಘಟನೆಯಿಂದ ಪೊಲೀಸ್‌ ಇಲಾಖೆ ಪುರಸಭೆಗೆ ಪತ್ರ ಬರೆದು ಫುಟ್‌ ಪಾತ್‌ ಅಂಗಡಿಗಳನ್ನು ತೆರವುಗೊಳಿಸುವಂತೆ ಪತ್ರ ಬರೆಯಲಾಗಿತ್ತು, ಪುರಸಭೆಯವರು ತುಮಕೂರು ಜಿಲ್ಲಾ˜ಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಕಳೆದ ೩ ತಿಂಗಳ ಹಿಂದೆ ಗೂಡಂಗಡಿ ಮತ್ತು ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲು ತಿಳಿಸಲಾಗಿತ್ತು.
ಆದರೆ ಪೆಟ್ಟಿಗೆ ಅಂಗಡಿಗಳ ಮಾಲೀಕರು ತೆರವುಗೊಳಿಸಲು ಒಪ್ಪರಲಿಲ್ಲ. ಪುರಸಭೆ ಅ˜ಕಾರಿಗಳು ಪೊಲೀಸ್‌ ಸರ್ಪಗಾವಲಿನಲ್ಲಿ ಜೆ.ಸಿ.ಬಿ. ಯಂತ್ರದ ಸಹಾಯದಿಂದ ತೆರವುಕಾರ್ಯಚರಣೆ ನಡೆಸಿ ಪಾದಚಾರಿಗಳಿಗೆ ಮತ್ತು ವಾಹನ ಚಾಲಕರಿಗೆ

No Comments to “ಫುಟ್ ಪಾತ್‌ ಅಂಗಡಿಗಳ ತೆರವಿಗೆ ಚಾಲನ”

add a comment.

Leave a Reply

You must be logged in to post a comment.