ಹಳೆಯ ಪಡಿತರಚೀಟಿ ನವೀಕರಣ

ತುಮಕೂರು ೨೦೧೦ ನೇ ಇಸವಿಗೆ ಮುನ್ನ ವಿತರಿಸಿದ್ದ ಪಡಿತರ ಚೀಟಿಗಳ ನವೀಕರಣ ಕಾರ್ಯ ಜಿಲ್ಲೆಯಲ್ಲಿ ಚುರುಕಿನಿಂದ ಸಾಗಿದೆ ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ೩.೩೬ ಲಕ್ಷ ಪಡಿತರ ಚೀಟಿಗಳನ್ನು ೨೦೧೦ ನೇ ವರುಷ ಹಾಗೂ ಅದರ ಹಿಂದಿನ ವರುಷಗಳಲ್ಲಿ ವಿತರಿಸಲಾಗಿತ್ತು. ಈ ಪೈಕಿ ನವೀಕರಣ ಕೋರಿ ೨.೨೩ ಲಕ್ಷ ಪಡಿತರ ಕುಟುಂಬಗಳು ಅರ್ಜಿ ಸಲ್ಲಿಸಿವೆ. ದಿನಾಂಕ: ೩.೧೨.೨೦೧೪ ರ ಅಂತ್ಯದವರೆಗೆ ೫೮೨೦೦ ಪಡಿತರ ಚೀಟಿಗಳನ್ನು ನವೀಕರಿಸಿ ವಿತರಿಸಲಾಗಿದೆ ಎಂದು ಕಛೇರಿ ಮೂಲಗಳು ತಿಳಿಸಿವೆ. ೧೩೩೭೮೬ ಪಡಿತರ ಚೀಟಿಗಳು ವಿತರಣೆಗೆ ಸಿದ್ಧವಾಗಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿತರಣೆ ಕಾರ್ಯ ನಡೆಯುತ್ತಿದೆ. ೧೧೬೦೬ ಕೋರಿಕೆಗಳು ಅನುಮೋದನಾ ಹಂತದಲ್ಲಿವೆ. ೭೩೯ ಕೋರಿಕೆಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ. ಮಧುಗಿರಿ ತಾಲ್ಲೂಕಿನಲ್ಲಿ ನವೀಕರಣ ಕೋರಿ ೨೦೮೦೦ ಅರ್ಜಿ ಸಲ್ಲಿಕೆಯಾಗಿದ್ದು, ಈವರೆಗೆ ೧೦೦೬೬ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ೮೬೪೧ ಪಡಿತರ ಚೀಟಿಗಳ ವಿತರಣಾ ಕಾರ್ಯ ಪ್ರಗತಿಯಲ್ಲಿದೆ. ತುಮಕೂರು ನಗರ, ಗ್ರಾಮಾಂತರ ಸೇರಿದಂತೆ ೪೦೪೧೯ ಕೋರಿಕೆ ಪೈಕಿ ೧೨೧೦೭ ಪಡಿತರ ಚೀಟಿ ವಿತರಿಸಲಾಗಿದ್ದು, ೨೨೫೧೭ ಪಡಿತರ ಚೀಟಿ ವಿತರಣಾ ಕಾರ್ಯ ನಡೆಯುತ್ತಿದೆ. ಪಾವಗಡ ತಾಲ್ಲೂಕಿನ ೨೮೭೫೩ ಕೋರಿಕೆಗಳಲ್ಲಿ ೮೨೭೯ ವಿತರಣೆ ಆಗಿದ್ದು, ೧೭೨೦೮ ಪಡಿತರ ಚೀಟಿ ವಿತರಣಾ ಕಾರ್ಯ ಬಾಕಿ ಇದೆ. ಶಿರಾ ತಾಲ್ಲೂಕಿನ ೨೨೬೭೧ ಕೋರಿಕೆ ಪೈಕಿ ಇದುವರೆಗೆ ೪೮೬೮ ಪಡಿತರ ಚೀಟಿಗಳ ವಿತರಣೆ ಮುಗಿದಿದ್ದು, ೧೫೩೧೪ ಪಡಿತರ ಚೀಟಿಗಳ ವಿತರಣಾ ಕಾರ್ಯ ಪ್ರಗತಿಯಲ್ಲಿದೆ. ಗುಬ್ಬಿ ತಾಲ್ಲೂಕಿನಲ್ಲಿ ೨೨೩೫೮ ಕೋರಿಕೆಗಳು ಸ್ವೀಕೃತವಾಗಿದ್ದು, ೨೩೫೯ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ೧೭೯೩೬ ಪಡಿತರ ಚೀಟಿ ವಿತರಣಾ ಕಾರ್ಯ ನಡೆಯುತ್ತಿದೆ. ಚಿಕ್ಕನಾಯನಹಳ್ಳಿ ತಾಲ್ಲೂಕಿನಲ್ಲಿ ೧೪೧೧೭ ಪಡಿತರ ಚೀಟಿ ಕುಟುಂಬಗಳನ್ನು ನವೀಕರಣ ಕೋರಿ ೩೦೯೦ ಕುಟುಂಬಕ್ಕೆ ಪಡಿತರ ಚೀಟಿ ನೀಡಿದ್ದು, ೭೮೨೨ ವಿತರಣೆಯಲ್ಲಿವೆ. ಕೊರಟಗೆರೆ ತಾಲ್ಲೂಕಿನಲ್ಲಿ ೧೯೯೮೦ ಪಡಿತರ ಚೀಟಿದಾರರ ನವೀಕರಣ ಕೋರಿಕೆ ಪೈಕಿ ೪೧೫೪ ಮಂದಿಗೆ ಹೊಸ ಪಡಿತರ ಚೀಟಿ ನೀಡಲಾಗಿದ್ದು, ೧೪೩೦೬ ಪಡಿತರ ಚೀಟಿ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಕುಣಿಗಲ್‌ ತಾಲ್ಲೂಕಿನ ೧೯೦೪೯ ಕೋರಿಕೆ ಪೈಕಿ ೬೬೮೨ ಪಡಿತರ ಚೀಟಿ ವಿತರಣೆ ಆಗಿದ್ದು, ೯೨೭೪ ವಿತರಣೆ ಬಾಕಿ ಇದೆ. ತಿಪಟೂರು ತಾಲ್ಲೂಕಿನಲ್ಲಿ ೧೮೭೪೮ ಕೋರಿಕೆ ಅರ್ಜಿಗಳಲ್ಲಿ ೪೦೪೯ ಮಂದಿಗೆ ನವೀಕರಣಗೊಂಡ ಪಡಿತರ ಚೀಟಿ ವಿತರಿಸಿದ್ದು, ೯೦೪೮ ಪಡಿತರ ಚೀಟಿಗಳ ವಿತರಣೆ ಕಾರ್ಯ ಭರದಿಂದ ಸಾಗಿದೆ. ಇನ್ನು ತುರುವೇಕೆರೆ ತಾಲ್ಲೂಕಿನಲ್ಲಿ ೧೬೫೬೪ ಕುಟುಂಬಗಳು ನವೀಕರಣ ಕೋರಿದ್ದು, ೨೫೪೬ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸಿದ್ದು, ೧೨೦೮೫ ಪಡಿತರ ಚೀಟಿಗಳ ವಿತರಣೆ ಬಾಕಿ ಇದೆ. ನವೀಕರಣ ಹಾಗೂ ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರ ಪೈಕಿ ಇನ್ನೂ ಬಹಳಷ್ಟು ಮಂದಿ ಎಸ್‌ಎಂಎಸ್‌ ಕಳುಹಿಸಿಲ್ಲದಿರುವುದನ್ನು ಗಮನಿಸಿ ಎಸ್‌.ಎಂ.ಎಸ್‌. ಕಳುಹಿಸುವ ಪ್ರಕ್ರಿಯೆಯನ್ನು ಈ ಮಾಸಾಂತ್ಯದವರೆಗೂ ವಿಸ್ತರಿಸಲಾಗಿದೆ. ಎಸ್‌.ಎಂ.ಎಸ್‌. ಕಳುಹಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಕುಟುಂಬಗಳಿಗೆ ಜನವರಿ ತಿಂಗಳಿನಿಂದ ಪಡಿತರ ಹಂಚಿಕೆ ಸ್ಥಗಿತಗೊಳ್ಳುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

No Comments to “ಹಳೆಯ ಪಡಿತರಚೀಟಿ ನವೀಕರಣ”

add a comment.

Leave a Reply

You must be logged in to post a comment.