‘ಜಾತಿ ಗಣತಿ:ನಿಖರವಾದ ಮಾಹಿತಿ ನೀಡಿ’

ಬೆಂಗಳೂರು ಜಾತಿ ಗಣತಿ ಕಾರ್ಯ ಪವಿತ್ರವಾದುದು. ಸಾಮಾಜಿಕ ನ್ಯಾಯಕ್ಕಾಗಿ ಇದನ್ನು ಮಾಡಲಾಗುತ್ತಿದೆ.ಯಾರೂ ಕೂಡ ಸುಳ್ಳು ಹೇಳದೆ ನಿಖರವಾದ ಜಾತಿ ವಿವರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿಳಿಸಿದರು. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಜಾತಿ ಗಣತಿ ವೇಳೆ ನಿಖರವಾದ ಮಾಹಿತಿ ನೀಡಿದರೆ ಯಾವುದೇ ಸೌಲಭ್ಯ ಕೈ ತಪ್ಪುವುದಿಲ್ಲ ಎಂದು ಹೇಳಿದರು. ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸುವಂತೆಯೇ ಜಾತಿಗಣತಿಯನ್ನು ಕೂಡ ಗಂಭೀರವಾಗಿ ಪರಿಗಣಿಸಿ ಈ ಕಾರ್ಯ ಮಾಡಬೇಕು.ಎಲ್ಲ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು.ನಾವು ಕೂಡ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಗೋಡೆ ಬರಹ, ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ ಎಂದು ಹೇಳಿದರು. ಜಾತಿಗಣತಿ ಸಮೀಕ್ಷಾ ಕಾರ್ಯ ನಿಜಕ್ಕೂ ಸಾಹಸದ ಕೆಲಸವಾಗಿದೆ ಎಂದ ಅವರು, ಅವಮಾನಕರವಾದ ಜಾತಿ ಹೆಸರನ್ನು ತೆಗೆದು ಪರ್ಯಾಯ ಶಬ್ದ ಬಳಸಬೇಕು ಎಂದು ಹೇಳಿದರು. ಒಂದು ವೇಳೆ ಗಣತಿಗೆ ರಾಜಕೀಯ ಪಕ್ಷಗಳ ಅಪಸ್ವರ ಇದ್ದರೆ ಅವರ ಅಹವಾಲನ್ನು ಕೇಳುತ್ತೇವೆ. ಈ ಕಾರ್ಯವನ್ನು ರಾಜಕಾರಣಕ್ಕಾಗಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಸರ್ಕಾರ ವೈದ್ಯ ಇದ್ದಂತೆ.ಸಮಾಜದ ರೋಗ ಪತ್ತೆಹಚ್ಚಲು ಇಂತಹ ಜಾತಿಗಣತಿ ಕಾರ್ಯ ಆಗಬೇಕು ಎಂದು ತಿಳಿಸಿದರು. ಪ್ರಾಧ್ಯಾಪಕ ಬಿ.ಕೆ.ರವಿ ಮಾತನಾಡಿ, ನೂರಕ್ಕೆ ನೂರರಷ್ಟು ಜನಸಂಖ್ಯಾ ಸಮೀಕ್ಷೆ ಅರ್ಥಪೂರ್ಣವಾಗಿ ಆಗಬೇಕು.ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್‌ ಮಾತನಾಡಿ, ಸಮೀಕ್ಷೆ ವಿರೋ˜ಸುವವರಿಗೆ ಬಡವರ ನೋವು ಗೊತ್ತಿಲ್ಲ. ಗೊಲ್ಲರಹಟ್ಟಿ, ಹಾಡಿಗಳಲ್ಲಿ ಗಣತಿಯನ್ನು ಸೂಕ್ಷ್ಮವಾಗಿ ಸಮೀಕ್ಷೆ ನಡೆಸಬೇಕು ಎಂದರು. ದಲಿತ ಕವಿ ಸಿದ್ದಲಿಂಗಯ್ಯ ಮಾತನಾಡಿ, ೧೯೩೧ರಲ್ಲಿ ಸಮೀಕ್ಷೆಯಾಗಿತ್ತು. ಜನಪರ ಕಾರ್ಯಕ್ರಮ ರೂಪಿಸಲು ಜಾತಿಗಣತಿ ಒಳಿತಾಗುತ್ತದೆ. ದುರ್ಬಲರನ್ನು ಮೇಲೆತ್ತಲು ಅನುಕೂಲ ಎಂದು ಅಭಿಪ್ರಾಯಪಟ್ಟರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಮಾತನಾಡಿ, ಗಣತಿಯಿಂದ ಜಾತಿ&ಜಾತಿಗಳ ಅಂತರ ಕಡಿಮೆಯಾಗುತ್ತದೆ. ಗಣತಿದಾರರಿಗೆ ಮನೆಯವರು ನೀಡುವ ಜಾತಿಯೇ ಅಂತಿಮವಾಗಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಮಾಜಿ ಸ್ಪೀಕರ್‌ ಸುದರ್ಶನ್‌, ಆಯೋಗದ ಸದಸ್ಯರಾದ ಲಿಂಗಪ್ಪ, ಗೋಪಾಲ್‌, ಶರಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರರು ಪಾಲ್ಗೊಂಡಿದ್ದರು

One Comment to “‘ಜಾತಿ ಗಣತಿ:ನಿಖರವಾದ ಮಾಹಿತಿ ನೀಡಿ’”

  1. Shankareppa.Havannavar. says:

    Caste population census is one of the important weapon to achieve Social justice.Thanks to Congress Govt.After Independence,in Karnataka,none of the Govt made effort to improve the std of living of Backward except late Shri,Devaraj Ursu.After getting the clear picture,of backward, the Govt is to make concrete rules to uplift backwards.The Uppars should be lifted to Main streem of the society.

Leave a Reply

You must be logged in to post a comment.