,

ತುಮಕೂರು ಕೇಂದ್ರ ವಲಯದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಅಮರ್ ಕುಮಾರ್ ಪಾಂಡೆ ಅವರು ತುಮ ಕೂರು ಜಿಲ್ಲೆಗೆ ನೀಡಿದ ಎರಡು ದಿನಗಳ ಅಧಿಕ್ರತ ಭೇಟಿಯ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಿ ಸಿದ ವಿವಿಧ ವಿಷಯಗಳ ಬಗ್ಗೆ ಆಮೂಲಾಗ್ರವಾಗಿ ತಪಾಸಣೆ, ಪರಿಶೀಲನೆ ನಡೆಸುವ ಮೂಲಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಬೆವರಿಳಿಸಿದ್ದಾರೆ. ನ.೧೯ ಮತ್ತು ೨೦ ರಂದು ಐಜಿಪಿ ಅವರು ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯ ವಿವಿಧ ವಿಭಾಗಗಳ ಕಾರ್ಯನಿರ್ವಹಣೆ ಯನ್ನು ಆಮೂಲಾಗ್ರವಾಗಿ ತಪಾಸಣೆ ಮಾಡಿದರು. ಪೊಲೀಸರು ಹಾಗೂ ಅಧಿಕಾರಿ ಗಳು ಧರಿಸುವ ಸಮವಸ್ತ್ರ ಸರ್ಕಾರ ದಿಂದ ನೀಡಲ್ಪಟ್ಟಿರುವುದೇ ಅಥವಾ ಖಾಸಗಿಯಾಗಿ ಇವರೇ ಸಿದ್ಧಪಡಿಸಿ ಕೊಂಡಿರುವುದೇ? ಪೊಲೀಸ್ ಇಲಾ ಖೆಯ ವಾಹನಗಳ ಸ್ಥಿತಿ-ಗತಿಗಳು ಹೇಗಿವೆ? ಅಧಿಕಾರಿಗಳು ಮತ್ತು ಸಿಬ್ಬಂ ದಿಯವರು ಪೊಲೀಸ್ ಮ್ಯಾನ್ಯು ಯಲ್ ಪ್ರಕಾರ ತಲೆಗೂದ ಲನ್ನು ನಿರ್ವಹಿಸುತ್ತಿರುವರೇ (ಕಟಿಂಗ್)? ಎಂಬಿತ್ಯಾದಿ ಸಣ್ಣಪುಟ್ಟ ಆದರೆ ಮಹ ತ್ವವುಳ್ಳ ವಿಷಯಗಳನ್ನೂ ಅವರು ಕಟ್ಟುನಿಟ್ಟಾಗಿ ಪರಿಶೀಲಿಸಿದರು. ಎಸ್ಪಿ, ಅಡಿಷನಲ್ ಎಸ್ಪಿ ಸೇರಿ ದಂತೆ ಜಿಲ್ಲೆಯ ಎಲ್ಲ ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ಗಳನ್ನು ಉದ್ದೇ ಶಿಸಿ ಮಾತನಾಡಿದ ಅವರು, ಉತ್ತಮವಾಗಿ ಕಾರ್ಯನಿರ್ವಹಿಸು ವಂತೆ ಕಿವಿಮಾತು ಹೇಳಿದರು. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ (ಡಿ.ಎ.ಆರ್.) ಭೇಟಿ ನೀಡಿದ ಐ.ಜಿ.ಪಿ. ಅಮರ್ ಕುಮಾರ್ ಪಾಂಡೆ ಅವರು, ಅಲ್ಲಿನ ಶಸ್ತ್ರಾಗಾರದ ಸುವ್ಯವಸ್ಥೆ ಬಗ್ಗೆ ಮೆಚ್ಚುಗೆ ಯನ್ನು ವ್ಯಕ್ತಪಡಿಸಿದರು. ನ.೧೯, ೨೦ ಮತ್ತು ೨೧ ರಂದು – ಹೀಗೆ ಮೂರು ದಿನಗಳ ಪೂರ್ವ ನಿಗದಿತ ಭೇಟಿ ಇತ್ತಾದರೂ, ನ. ೨೧ ರಂದು ಮುಖ್ಯಮಂತ್ರಿಗಳ ತುರ್ತು ಸಭೆಯ ಕರೆ ಮೇರೆಗೆ ಬೆಂಗಳೂರಿಗೆ ವಾಪಸ್ಸಾದರು. ನ.೨೧ ರಂದು ನಗರದ ವಿವಿಧ ಕೇತ್ರಗಳ ಗಣ್ಯರ ಸಭೆ, ಮಾಧ್ಯಮ ದವರ ಭೇಟಿ ಇತ್ಯಾದಿ ಕಾರ್ಯಕ್ರಮ ಗಳು ನಿಗದಿಗೊಂಡಿತ್ತಾದರೂ ಇವೆಲ್ಲ ವನ್ನೂ ರದ್ದುಪಡಿಸಿ ಬೆಳಗ್ಗೆ ೮.೩೦ ರಲ್ಲಿ ರಾಜಧಾನಿಗೆ ನಿರ್ಗಮಿಸಿದರು. vigrx oil

No Comments to “,”

add a comment.

Leave a Reply

You must be logged in to post a comment.