: :

ಗುಬ್ಬಿ ರಾಷ್ಟ್ರೀಯ ಪಕ್ಷಗಳು ಜನ ವಿರೋಧಿ, ರೈತವಿರೋಧಿ ನೀತಿ ಅನುಸರಿಸುತ್ತಿರುವುದರ ಜೊತೆಗೆ ಆಂತರಿಕ ಕಚ್ಚಾಟದಲ್ಲಿ ತೊಡಗಿರು ವುದರಿಂದ ಅನಿವಾರ್ಯವಾಗಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರಬೇಕಾದ ಪರಿಸ್ಥಿತಿ ಉಂಟಾ ಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ .ಎಸ್ . ಯಡಿಯೂರಪ್ಪ ತಿಳಿಸಿದರು. ಅವರು ಪಟ್ಟಣದ ಶ್ರೀಚೆನ್ನಬಸ ವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಮಾಜಿ ಸಚಿವ ಸಾಗರನಹಳ್ಳಿ ರೇವಣ್ಣ ಅವರ ಜನ್ಮಶತಮಾನೋತ್ಸವ ಸಮಾ ರಂಭದಲ್ಲಿ ಭಾಗವಹಿಸಿ ಮಾತ ನಾಡಿದ ಅವರು ಕಳೆದ ಮೂರೂ ವರೆ ವರ್ಷ ತಾವು ಮುಖ್ಯ ಮಂತ್ರಿ ಗಳಾಗಿದ್ದ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವ್ರದ್ದಿಗೆ ಮಾಡಿದ ಜನಪರ ಸಾಧನೆಗಳನ್ನು ಸಹಿಸದೆ ನಮ್ಮ ಪಕದವರೇ ಕಾಲೆಳೆಯುವ ಕೆಲಸ ಮಾಡಿ ಅಪರಾಧ ಸಾಬೀತಾ ಗುವ ವೊದಲೇ ಜೈಲಿಗೆ ಕಳುಹಿಸು ವಂತಹ ನೀಚ ಕೆಲಸ ಮಾಡಿದರು ಎಂದು ವಿಷಾದ ವ್ಯಕ್ತಪಡಿಸಿದರು. ತಾವು ಮುಖ್ಯ ಮಂತ್ರಿಯಾಗಿ ದ್ದಾಗ ಯಾವುದೇ ತೆರಿಗೆ ವಿಧಿಸದೇ ೪೦ ಸಾವಿರ ಕೋಟಿಯಷ್ಟಿದ್ದ ರಾಜ್ಯದ ಬಜೆಟ್ನ್ನು ೧ ಲಕ್ಷ ಕೋಟಿ ಮಂಡಿಸಿ ರಾಜ್ಯದ ಅಭಿವ್ರದ್ದಿಗೆ ಹತ್ತು ಹಲವು ಮಹತ್ವದ ಯೋಜನೆ ಗಳನ್ನು ಜಾರಿಗೂಳಿಸಿರುವುದಾಗಿ ತಿಳಿಸಿದ ಅವರು, ಇಡೀ ಇತಿಹಾಸ ದಲ್ಲೇ ಪ್ರಥಮ ಬಾರಿಗೆ ರೈತ ಬಜೆಟ್ ಮಂಡಿಸಿ ರೈತರ ಅಭ್ಯುದ ಯಕ್ಕೆ ಪೂರಕವಾದ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೂಳಿಸಿ ದ್ದಾಗಿ ತಿಳಿಸಿದರು. ೩೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ೭ ಲಕ್ಷ ಎಕರೆಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಿದ್ದಾಗಿ ತಿಳಿಸಿದರು. ಬಡ ಹೆಣ್ಣು ಮಕಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ರಾಜ್ಯದ ೧೭ ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸ ಲಾಗಿದೆ. ಹೈನುಗಾರಿಕೆ ಅಭಿವ್ರದ್ದಿಗೆ ವಿಶೇಷ ಪ್ರೋತ್ಸಾಹ ಧನ ನೀಡಲಾ ಗಿದ್ದು ೨೫ ಲಕ್ಷ ಲೀಟರ್ನಷ್ಟಿದ್ದ ಹಾಲು ಉತ್ಪಾದನೆಯನ್ನು ೫೫ ಲಕ್ಷ ಲೀಟರ್ಗೆ ಏರಿಸಲಾಗಿದೆ. ಶೈಕಣಿಕ ಅಭಿವ್ರದ್ದಿಗೆ ಪ್ರೋತ್ಸಾಹ ನೀಡುವ ಸಲುವಾಗಿ ೨೫ ಲಕ್ಷ ಬಡ ವಿದ್ಯಾ ರ್ಥಿಗಳಿಗೆ ಉಚಿತ ಸೈಕಲ್ಗಳನ್ನು ವಿತರಿಸಲಾಗಿದೆ. ತುರ್ತು ಚಿಕಿತ್ಸೆ ಗಳಿಗಾಗಿ ೧೦೮ ವಾಹನ ಸೌಲಭ್ಯ. ರೈತರಿಗೆ ೧ ರಿಂದ ೩ ಲಕದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ರಾಜ್ಯ ದಲ್ಲಿ ಶೈಕಣಿಕ ಪ್ರಗತಿಗೆ ಅನುಕೂಲ ವಾಗುವಂತೆ ೭ ವಿಶ್ವ ವಿದ್ಯಾಲಯ ಗಳ ಸ್ಥಾಪನೆ ಹಾಗೂ ಜಾನಪದ ಮತ್ತು ಸಂಗೀತ ವಿಶ್ವವಿದ್ಯಾಲಯ ಗಳನ್ನು ಸ್ಥಾಪಿಸುವ ಮೂಲಕ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. Propecia

No Comments to “: :”

add a comment.

Leave a Reply

You must be logged in to post a comment.