: – `

ಬೆಂಗಳೂರು ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಡಿಸೆಂಬರ್ ೧೦ ರಂದು ಹೊಸ ರಾಜಕೀಯ ಪಕ್ಷ ಸ್ಧಾಪಿಸುತ್ತಿರುವ ಬೆಳವಣಿಗೆಯ ನಡುವೆುಯೋ ಬೆಳಗಾವಿಯಲ್ಲಿ ಡಿ.೫ ರಿಂದ ೧೩ ರ ತನಕ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಬಿಜೆಪಿ ಸರ್ಕಾರ ಈಗಾಗಲೇ ಬಹುತೇಕ ನಿಷ್ಕ್ರಿಯವಾಗಿದ್ದು, ಸತ್ತಿರುವ ಸರ್ಕಾರವನ್ನು ಮತ್ತೊಮ್ಮೆ ಹತ್ಯೆ ಮಾಡುವ ಪಾಪದ ಕೆಲಸ ಬೇಡ ಎನ್ನುವ ನಿಲುವನ್ನು ಹಲವು ಮಂದಿ ಕಾಂಗ್ರೆಸಿಗರು ವ್ಯಕ್ತಪಡಿಸು ತ್ತಿದ್ದಾರೆ. ಆದರೂ ಈ ಕುರಿತು ಪರಿಶೀಲನೆ ನಡೆಸಲು ಉದ್ದೇಶಿಸ ಲಾಗಿದೆ. ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಸ್ಥಾಪನೆಗೆ ಮುಂದಾ ಗಿರುವುದು ರಾಜ್ಯ ರಾಜಕೀಯದಲ್ಲಿ ಉತ್ತಮ ಬೆಳವಣಿಗೆಯಾಗಿದ್ದು, ಇದರಿಂದಾಗಿ ಬಿಜೆಪಿಯಲ್ಲಿ ಉಂಟಾ ಗಿರುವ ಒಡಕಿನ ಲಾಭ ಪಡೆಯಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಡೆಯು ತ್ತಿರುವ ಬೆಳವಣಿಗೆಗಳನ್ನು ಮೌನ ವಾಗಿ ಗಮನಿಸುತ್ತಿದ್ದ ಪ್ರತಿಪಕ್ಷ ಕಾಂಗ್ರೆಸ್ ಏಕಾಏಕಿ ಮೈ ಕೊಡವಿ ನಿಲ್ಲಲು ಪ್ರಯತ್ನಿಸುತ್ತಿದೆ. ಬಿಜೆಪಿಯ ೪೫ಕ್ಕು ಹೆಚ್ಚು ಶಾಸಕರು, ೯ ಸಂಸದರು, ೧೬ ವಿಧಾನ ಪರಿಷತ್ ಸದಸ್ಯರು ಯಡಿಯೂರಪ್ಪ ಅವರೊಂದಿಗೆ ಬಹಿರಂಗವಾಗಿ ಗುರ್ತಿಸಿಕೊಂಡಿ ದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಬಹುಮತ ಕಳೆದು ಕೊಂಡಂತಾಗಿದೆ. ಆದ್ದರಿಂದ ಮುಂಬ ರುವ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅವಿ ಶ್ವಾಸ ನಿರ್ಣಯ ಮಂಡಿಸಬಾರ ದೇಕೆ ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ಇಷ್ಟು ದಿನ ಬಿಜೆಪಿ ತನ್ನ ಒಳ ಜಗಳದಿಂದ ತಾನಾಗೇ ಸರ್ಕಾರ ಉರುಳಿ ಹೋಗುವಂತೆ ಮಾಡಿ ಕೊಳ್ಳುತ್ತದೆ. ಸರ್ಕಾರ ಉರುಳಿಸಿದ ಅಪಖ್ಯಾತಿ ತಾವು ತೆಗೆದುಕೊಳ್ಳು ವುದು ಬೇಡ. ಅದು ಚುನಾವಣೆ ಯಲ್ಲಿ ವ್ಯತಿರಿಕ್ತ ಪರಿಣಾಮ ಬೀರ ಬಹುದು ಎಂದು ಕಾಂಗ್ರೆಸ್ ಹೈ ಕಮಾಂಡ್ ಚಿಂತನೆ ನಡೆಸಿದೆ. ಹಾಗೆಂದು ಈಗ ಸಿಕ್ಕಿರುವ ಈ ಅವಕಾಶವನ್ನು ಬಿಟ್ಟುಕೊಡಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮನ ಸ್ಸಿಲ್ಲ.ಅದಕ್ಕೇ ಅಧಿವೇಶನಕ್ಕೆ ವೊದಲು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಅವರೊಂದಿಗೆ ಚರ್ಚಿಸಿ ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಎಸ್.ಆರ್.ಪಾಟೀಲ್ ಹೇಳಿದ್ದಾರೆ. valium on the internet

No Comments to “: – `”

add a comment.

Leave a Reply

You must be logged in to post a comment.