ಅಕ್ರಮ ಗಣಿಗಾರಿಕೆ: ಲೋಕಾಯುಕ್ತ ಸಂಸ್ಥೆ ಸಲಹೆ ಕೋರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ

ಬೆಂಗಳೂರು ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿರುವ ವರದಿಯನ್ನು ತಿರಸ್ಕರಿಸಲು ವೊದಲ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ರಾಜಕೀಯ ವ್ಯಕ್ತಿಗಳ ಮೇಲೆ ಮಾಡ ಲಾಗಿರುವ ಆರೋಪಗಳ ಕುರಿತಂತೆ ಲೋಕಾಯುಕ್ತ ಸಂಸ್ಧೆಯ ಸಲಹೆ ಕೋರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಲೋಕಾಯುಕ್ತ ವರದಿಯಲ್ಲಿ ರಾಜಕೀಯ ವ್ಯಕ್ತಿಗಳ ಮೇಲೆ ಮಾಡ ಲಾಗಿರುವ ಆರೋಪದ ಸಂದರ್ಭ ದಲ್ಲಿ ಸಹಜ ನ್ಯಾಯ ಅನುಸರಿಸಿಲ್ಲ. ತಪ್ಪಿತಸ್ಧರೆಂದು ಕಂಡುಬರುವ ವ್ಯಕ್ತಿ ಗಳಿಂದ ಸಮಜಾಯಿಷಿ ಕೇಳಿಲ್ಲ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ವಾಗಿದೆ ಎಂದು ಸಂಪುಟ ಸಭೆ ಅಭಿಪ್ರಾಯಕ್ಕೆ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಅವರನ್ನು ಕಾನೂನಿನ ಕುಣಿಕೆಯಿಂದ ಪಾರು ಮಾಡಲು ರ್ಕಾುೊಂನ್ಮುಖವಾಗಿರುವ ಬಿಜೆಪಿ ಸರ್ಕಾರ, ಇದಕ್ಕಾಗಿ ಕಾನೂನಿನಲ್ಲಿ ರುವ ದಾರಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ಯಾವುದಾದರೂ ಅಧಿಕಾರಿ ಗಳ ವಿರುದ್ಧ ಶಿಪ್ಸ್ರಾರಸ್ಸು ಮಾಡುವ ಸಂದರ್ಭದಲ್ಲಿ ಅವರಿಂದ ಸ್ಪಷ್ಟೀ ಕರಣ ಕೇಳುವುದು ಸಂಪ್ರದಾಯ. ಆದರೆ ರಾಜಕಾರಣಿಗಳ ವಿಚಾರ ದಲ್ಲಿ ಇದಕ್ಕೆ ತದ್ವಿರುದ್ಧವಾಗಿ ವರ್ತಿಸ ಲಾಗಿದೆ. ಹಾಗಾಗಿ ಲೋಕಾಯುಕ್ತ ಸಂಸ್ಧೆಯ ಸಲಹೆ ಕೇಳಿದ ನಂತರ ಮುಂದಿನ ಹೆಜ್ಜೆ ಇಡಲು ಸಭೆ ನಿರ್ದ್ಸ್ರರಿಸಿದೆ. ಇದೇ ವಿಚಾರವನ್ನು ಮುಂದಿಟ್ಟು ಕೊಂಡು ಲೋಕಾಯುಕ್ತ ವರದಿಯನ್ನು ತಿರಸ್ಕರಿಸುವುದು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕ್ರಷ್ಣ ಕಾಲದಿಂದ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ನೆಪದಲ್ಲಿ ವರದಿಯನ್ನು ತಿರಸ್ಕರಿಸುವುದು. ಮತ್ತೊಮ್ಮೆ ತನಿಖೆಗೆ ಆದೇಶಿಸು ವುದು ಇದರ ಹಿಂದಿನ ಉದ್ದೇಶವಾ ಗಿದೆ ಎನ್ನಲಾಗಿದೆ. ಸಭೆಯ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್, ಲೋಕಾಯುಕ್ತ ವರದಿಯಲ್ಲಿ ರಾಜ ಕೀಯ ವ್ಯಕ್ತಿಗಳನ್ನು ನೇರವಾಗಿ ಗುರಿ ಮಾಡಲಾಗಿದೆ. ಈ ಸಂಬಂದ್ಸ್ರ ಕಾನೂನು ತಜ್ಞರು, ಅಡ್ವೋಕೆಟ್ ಜನರಲ್ ಅವರ ಅಭಿಪ್ರಾಯ ಪಡೆ ಯಲಾಗಿದೆ. ಇದಾದ ನಂತರವೇ ಸಲಹೆ ಕೇಳುವ ತೀರ್ಮಾನ ಕೈಗೊ ಳ್ಳ್ಳಾಗಿದೆ ಎಂದು ಹೇಳಿದರು. ಆದರೆ ಅಧಿಕಾರಿಗಳ ವಿಚಾರ ದಲ್ಲಿ ಲೋಕಾಯುಕ್ತ ಸಂಸ್ಧೆ ಸಹಜ ಮತ್ತು ಸಾಮಾಜಿಕ ನ್ಯಾಯ ಪಾಲಿಸಿದೆ. ಅವರ ವಿರುದ್ಧದ ಆರೋಪಗಳ ಬಗ್ಗೆ ಸಂಬಂದ್ಸ್ರಪಟ್ಟ ಅಧಿಕಾರಿಗಳಿಂದ ವಿವರಣೆ ಕೋರಿ ಮಾಹಿತಿ ಪಡೆದಿದೆ. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿ ್ಳ್ಳಯಾದ ೭೮೭ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಜರುಗಿಸ ಲಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಇದಕ್ಕಾಗಿ ರಾಜ್ಯದ ಹೆಚ್ಚುವರಿ ಮುಖ್ಯಕಾರ್ಯ ದರ್ಶಿ ಕೆ. ಜೈರಾಜ್ ನೇತ್ರತ್ವದಲ್ಲಿ ಸಮಿತಿ ರಚಿಸಿದ್ದು, ಸಮಿತಿ ವರದಿ ಸಲ್ಲಿಸಲಿದ ನಂತರ ಕ್ರಮ ಜರುಗಿ ಸುವ ಪ್ರಕ್ರಿುೆುಂಗೆ ಚಾಲನೆ ದೊರೆಯ ಲಿದೆ ಎಂದು ಸುರೇಶ್ ಕುಮಾರ್ ಹೇಳಿದರು. ಆದರೆ ಸರ್ಕಾರದ ಸಂದೇಹ ವೆಂದರೆ ಇದೇ ಮಾನದಂಡ ರಾಜ ಕಾರಣಿಗಳ ವಿಚಾರದಲ್ಲಿ ಅನುಸರಿ ಸಿಲ್ಲ. ಹಾಗೆಂದು ಸರ್ಕಾರ ಲೋಕಾ ಯುಕ್ತ ಸಂಸ್ಧೆಯನ್ನು ದೂರುತ್ತಿಲ್ಲ. ಸರ್ಕಾರಕ್ಕಿರುವ ಅನುಮಾನವನ್ನು ಪರಿಹರಿಸಿಕೊಳ್ಳ್ಳುವ ಮಾರ್ಗ ಇದಾಗಿದೆ ಎಂದು ನುಡಿದರು. ಶಾಸನ ಸಭಾ ನಿಯಮಾವಳಿ ೧೯೧ ರ ಪ್ರಕಾರ, ಸಲಹೆ ಕೋರಲು ಅವಕಾಶವಿದೆ. ಇದನ್ನು ಬಳಸಿ ಕೊಂಡು ಸರ್ಕಾರ ಸಲಹೆ ಪಡೆಯು ತ್ತಿದೆ. ಲೋಕಾಯುಕ್ತ ಸಂಸ್ಧೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡ ಲಿದೆ ಎಂಬ ವಿಶ್ವಾಸವಿದೆ. ಸರ್ಕಾ ರದ ಈ ನಿರ್ದ್ಸ್ರಾರ ವರದಿಯನ್ನು ತಿರಸ್ಕರಿಸುವ ಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು. ಲೋಕಾಯುಕ್ತ ವರದಿಯ ಬಗ್ಗೆ ಕೇಂದ್ರ ಸ್ವಾಧೀಕಾರ ಸಮಿತಿ ಗಂಭೀರವಾಗಿ ಗಮನಿಸುತ್ತಿದೆ. ಹೀಗಿರುವಾಗ ವರದಿಯನ್ನು ತಿರಸ್ಕ ರಿಸಲು ಹೇಗೆ ಸಾದ್ಸ್ರ್ಯ ಎಂದು ಸುರೇಶ್ ಕುಮಾರ್ ಪ್ರಶ್ನೆಯೊಂದಕ್ಕೆ ಪ್ರಶ್ನಿಸಿದರು. ಲೋಕಾಯುಕ್ತ ವರದಿ ಸಲ್ಲಿಕೆಯಾದ ನಂತರ ಯಡಿ ಯೂರಪ್ಪ ಮುಖ್ಯಮಂತ್ರಿ ಸ್ಧಾನಕ್ಕೆ ರಾಜೀ ನಾಮೆ ಸಲ್ಲಿಸಿದರು. ಆಗ ಇಡೀ ಸಂಪುಟ ಅಧಿಕಾರದಿಂದ ನಿರ್ಗಮಿಸಿತು. ಹೀಗಿರುವಾಗ ಯಾರನ್ನೋ ಉಳಿಸಲು ಕೈಗೊಳ್ಳ್ಳು ತ್ತಿರುವ ಕ್ರಮ ಇದಲ್ಲ ಎಂದರು ಪ್ರತಿಕ್ರಯಿಸಿದರು.

No Comments to “ಅಕ್ರಮ ಗಣಿಗಾರಿಕೆ: ಲೋಕಾಯುಕ್ತ ಸಂಸ್ಥೆ ಸಲಹೆ ಕೋರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ”

add a comment.

Leave a Reply