ಬೆಳೆಗಾರರಿಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆಯೆ…?

ತುಮಕೂರು ದಾಳಿಂಬೆ ಬೆಳೆಗೆ `ದುಂಡಾಣು ಅಂಗಮಾರ್ಳಿ’ ರೋಗ ಮಹಾಮಾರಿ ಯಂತೆ ಅಪ್ಪಳಿಸಿದ ಪರಿಣಾಮ ವಾಗಿ ತುಮಕೂರು ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗಾರರಿಗೆ ಅಂದಾಜು ೪೦ ಕೋಟಿ ರೂ. ನಷ್ಟವುಂಟಾಗಿದೆ. ಇದರಿಂದ ಹಲವು ಸಮಸ್ಯೆಗಳೊ ಳಗೆ ಸಿಲುಕಿದ ದಾಳಿಂಬೆ ಬೆಳೆಗಾರರ ಸ್ಥಿತಿ ಕರುಣಾಜನಕವಾಗಿದೆ. ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಮತ್ತು ಮಧುಗಿರಿ ತಾಲ್ಲೂಕುಗಳ ಸುಮಾರು ೧೩೫೧ ಹೆಕ್ಟೇರ್ ಪ್ರದೇಶಗಳಲ್ಲಿ “ದಾಳಿಂಬ್ಳೆ’್ಳ’ ಬೆಳೆಯನ್ನು ಬೆಳೆಯಲಾಗುತ್ತಿದೆ. ಇದೀಗ ದಾಳಿಂಬೆ ಬೆಳೆ “ದುಂಡಾಣು ಅಂಗಮಾರಿ ರೋಗಕ್ಕೆ ಬಲಿಯಾಗಿದೆ. ವಿಜ್ಞಾನ ಲೋಕಕ್ಕೆ ಸವಾಲಾಗಿ ಪರಿಣಮಿಸಿರುವ ಈ ರೋಗದಿಂದ ದಾಳಿಂಬೆ ಬೆಳೆ ಸರ್ವನಾಶಕ್ಕೆ ನಾಂದಿ ಆಡುತ್ತಿದೆ. ಇದುವರೆವಿಗೂ ರೈತ ರಿಗೆ ಭರ್ಜರಿ ಆರ್ಥಿಕ ಲಾಭವನ್ನು ತಂದುಕೊಟ್ಟ ಈ ಬೆಳೆ ರಫ್ತು ವಹಿವಾಟಿನಲ್ಲೂ ಕೂಡ ಪ್ರಮುಖ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಇಂತಹ ಮಹತ್ವದ ಬೆಳೆಗೆ ಅಪ್ಪಳಿಸಿರುವ ರೋಗದ ಬಗ್ಗೆ ರಾಜ್ಯ ಸರ್ಕಾರವಾಗಲೀ… ಕೇಂದ್ರ ಸರ್ಕಾ ರವಾಗಲೀ… ಅಥವಾ ಯಾವುದೇ ಕ್ರಷಿ ವಿಶ್ವವಿದ್ಯಾಲಯಗಳಾಗಲೀ ತಲೆಕೆಡಿಸಿಕೊಳ್ಳ್ಳುತ್ತಿಲ್ಲ. ತುಮಕೂರು ಜಿಲ್ಲೆ ಒಂದು ರೀತಿಯಲ್ಲಿ ಒಣ ಪ್ರದೇಶದಲ್ಲಿರು ವುದರಿಂದ ಮಧುಗಿರಿ ಉಪವಿಭಾಗ ವ್ಯಾಪ್ತಿಯಲ್ಲಿ ಈ ದಾಳಿಂಬೆ ಬೆಳೆ ಯನ್ನು ಹೆಚ್ಚು ಬೆಳೆಯಲಾಗುತ್ತಿದೆ. ೧೯೯೫-೯೬ ನೇ ಸಾಲಿನಲ್ಲಿ ಈ ಬೆಳೆ ಯನ್ನು ಜಿಲ್ಲೆಯಲ್ಲಿ ಪರಿಚಯಿಸಲಾ ಗಿದ್ದು ಆ ದಿನಗಳಲ್ಲಿ ಹೆಚ್ಚಾಗಿ ಸಾಂಪ್ರ ದಾಯಿಕ ತಳಿಗಳಾದ ಗಣೇಶ ಮತ್ತು ಸುಧಾರಿತ ತಳಿಯಾದ ಜ್ಯೋತಿ ಯನ್ನು ಬೆಳೆಯಲಾಗುತ್ತಿತ್ತು. ತದ ನಂತರದ ದಿನಗಳಲ್ಲಿ ರಫ್ತು ಬೇಡಿಕೆ ಇರುವ ಭಗ್ವ ತಳಿಗೆ ಧಾರಣೆ ಹೆಚ್ಚು ಹಾಗೂ ಬೇಡಿಕೆ ಇದ್ದ ಪರಿಣಾಮ ರೈತರು ಈ ತಳಿಗೆ ಮಾರು ಹೋದರು.ಈ ಬಗ್ಗೆ ರಫ್ತು ಆಧಾರಿತ ಸಂಸ್ಥೆಗಳಾದ ಅಪೆಡಾ, ಕ್ರಷಿ ಉತ್ಪನ್ನ ಮಾರುಕಟ್ಟೆ ಸಮಿತ, ತೋಟಗಾರಿಕೆ ಇಲಾಖೆ, ಹಾಗೂ ವಿವಿಧ ಬ್ಯಾಂಕ್ ವತಿ ಯಿಂದ ೧೪ ಜುಲೈ ೨೦೦೪ ರಂದು ದಾಳಿಂಬೆ ಬೆಳೆಯ ರಫ್ತು ಬಗ್ಗೆ ವಿಚಾರ ಸಂಕಿರಣ ಮತ್ತು ಸಮ್ಮೇ ಳನವನ್ನು ಸಹ ಹಮ್ಮಿಕೊಳ್ಳ್ಳಲಾ ಗಿತ್ತು. ಹಾಗೆಯೆ ದಾಳಿಂಬೆ ಬೆಳೆ ಹೆಚ್ಚಿಸಿ ರಫ್ತು ಉತ್ತೇಜನಕ್ಕೆ ೨೦೦೪- ೦೫ ನೇ ಸಾಲಿನಲ್ಲಿ ವಿವಿಧ ಬ್ಯಾಂಕ್ ಗಳ ವತಿಯಿಂದ ಸಾಲ ಮೇಳವನ್ನು ಹಮ್ಮಿಕೊಂಡು ಯಶಸ್ವಿಗೊಳಿ ಸಿತ್ತು. ಇದರಿಂದ ದಾಳಿಂಬೆ ಬೆಳೆಗಾ ರರಿಗೆ ಉತ್ತೇಜನ ಸಿಕ್ಕಿದಂತಾಗಿ ಬಯಲು ಸೀಮೆ ಪ್ರದೇಶವಾದ ಮಧುಗಿರಿ ಉಪವಿಭಾಗ ರೈತರು ಇದನ್ನು ಕ್ರಷಿಗೆ ಪರ್ಯಾಯ ಬೆಳೆ ಯಾಗಿ ಬೆಳೆಯಲು ಮುಂದಾದರು. ದಾಳಿಂಬೆ ಬೆಳೆಯ ವಿಸ್ತೀರ್ಣವೆಷ್ಟು..? ೨೦೧೧-೧೨ ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಸಮೀ ಕೆಯ ಪ್ರಕಾರ ಜಿಲ್ಲೆಯಲ್ಲಿ ಸುಮಾರು ೧೮೫೧ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯನ್ನು ಬೆಳೆಯ ಲಾಗುತ್ತಿದೆ. ಪಾವಗಡ-೪೮೦ ಹೆಕ್ಟೇರ್, ಶಿರಾ- ೭೨೬ ಹೆಕ್ಟೇರ್, ಮಧುಗಿರಿ- ೧೧೦ ಹೆಕ್ಟೇರ್, ತುಮಕೂರು- ೮ ಹೆಕ್ಟೇರ್ ಚಿ.ನಾ.ಹಳ್ಳ್ಳಿ- ೧೨ ಹೆಕ್ಟೇರ್, ಗುಬ್ಬಿ- ೭ ಹೆಕ್ಟೇರ್, ಕೊರ ಟಗೆರೆ- ೬ ಹೆಕ್ಟೇರ್, ತಿಪಟೂರು-೨ ಹೆಕ್ಟೇರ್ಗಳಷ್ಟಿದ್ದು ಈ ಪೈಕಿ ೫೦೦ ಹೆಕ್ಟೇರ್ನಷ್ಟು `ದಾಳಿಂಬೆ ಬೆಳ್ಳೆ’ ಯನ್ನು ರೈತರು ಕಿತ್ತು ಹಾಕಿದ್ದಾರೆ. ಸಮ್ರದ್ದ ಆರ್ಥಿಕ ಲಾಭದಾ ಯಕ, ಬೆಳೆಯಾಗಿ ಪ್ರಾರಂಭಿಕ ಹಂತದಲ್ಲಿ ಗೋಚರಿಸಿ ಬೆಳೆಗಾರ ರನ್ನು ಹೆಚ್ಚು ಹೆಚ್ಚು ಆಕರ್ಷಿಸಿತು. ಆದರೆ ಇಂತಹ ಆಕರ್ಷಣೆ ಹೆಚ್ಚು ಕಾಲ ಉಳಿಯಲಿಲ್ಲ. ೨೦೦೫-೦೬ ನೇ ಸಾಲಿನಲ್ಲಿ ದಾಳಿಂಬೆ (ಭಾಗ್ವ) ತಳಿಗೆ ಹೆಚ್ಚಾಗಿ ಬ್ಯಾಕ್ಟೀರಿಯಲ್ ಬೆೄಟ್ ರೋಗವು ಕಂಡು ಬಂದಿತ್ತು. ಕಾಲ ಕ್ರಮೇಣ ಈ ರೋಗವು ಮಹಾ ಮಾರಿಯಂತೆ ವ್ಯಾಪಕವಾಗಿ ಹರ ಡಿದ್ದ ಪರಿಣಾಮ ದಾಳಿಂಬೆ ಬೆಳೆ ಯಲ್ಲಿ ಶೇ. ೮೦ ರಷ್ಟು ಇಳುವರಿ ಕಂಡು ಬಂದಿತ್ತು. ಲಕ್ಷಾಂತರ ರೂಪಾಯಿಗಳನ್ನು ಸುರಿದಿದ್ದ ದಾಳಿಂಬೆ ಬೆಳೆಗಾರರು ಕಂಗಾಲಾ ದರು.

One Comment to “ಬೆಳೆಗಾರರಿಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆಯೆ…?”

 1. ಪ್ಲೀಸ್ ಅಪ್ಪ್ರೋವೆದ್ ದಿ ಲೋನ್ ಆಫ್ ದಿಸ್ . ಸೊ ಥಟ್ ಬೆಸ್ಟ್ ಗೋರ್ನಮೆಂಟ್ ಆಫ್ …….ಅಗ್ರಿಚುಲ್ತುರೆಸ್
  ಫ್ರಮ್ ,
  ನಾಗಭೂಷಣ.ಜ್ಞ
  ಸ/o ನರಸಿಂಹಪ್ಪ
  Goudeti (ವಿಲೇಜ್)
  ಪಾವಗಡ (T)
  ತುಮಕೂರ್ (D)
  ಕರ್ನಾಟಕ (ರಾಜ್ಯ)
  ಮೊಬೈಲ್ ನಂಬರ್ ೯೫೯೦೮೦೧೩೪೭.

Leave a Reply

You must be logged in to post a comment.