ದಿನವೊಂದಕ್ಕೆ ೩.೩೧ ಲಕ್ಷ ಕೆ.ಜಿ. ಹಾಲು ಶೇಖರಣೆ….!!

ತುಮಕೂರು ♦ ಜಿಲ್ಲೆಯಲ್ಲಿನ ಒಟ್ಟು ಹಾಲು ಉತ್ಪಾದಕರ ಸಹಕಾರ ಸಂಘಗಳು ೮೭೭ ♦ ಸದಸ್ಯರ ಸಂಖ್ಯೆ ೨೨೧೯೫೪ ಇದರಲ್ಲಿ ಪ.ಜಾತಿಯ ೨೧೬೧೭, ಪ.ಪಂಗಡದ ೧೭೬೩೩ ಸದಸ್ಯರು. ಮಹಿಳಾ ಸದಸ್ಯರು ೬೨೮೪೩. ♦ ಒಟ್ಟಾರೆ ಷೇರು ಬಂಡವಾಳ ೯.೫೪ ಕೋಟಿ ರೂ. ♦ ೨೦೧೦-೧೧ ರಲ್ಲಿ ದಿನವಹಿ ಸರಾಸರಿ ೩.೩೧ ಲಕ್ಷ ಕೆ.ಜಿ. ಹಾಲು ಶೇಖರಣೆ ♦ ೨೦೧೦-೧೧ ರಲ್ಲಿ ಗರಿಷ್ಟ ಹಾಲು ಶೇಖರಣೆ ೩.೭೬ ಲಕ್ಷ ಕೆ.ಜಿ. ಒಕ್ಕೂಟದ ಇತಿಹಾಸದಲ್ಲೇಹೊಸ ದಾಖಲೆ ♦ ದಿನವೊಂದಕ್ಕೆ ಸರಾಸರಿ ೧.೬೪ ಲಕ್ಷ ಲೀಟರ್ ಹಾಲು, ೧೭೦೫೦ ಕೆ.ಜಿ. ವೊಸರು ಮಾರಾಟ. ♦ ಪ್ರತಿ ತಿಂಗಳೂ ೭೮೦೭೬ ಲೀ. ತುಪ್ಪ, ೨೨೦೦ ಕೆ.ಜಿ ಪೇಡ, ೯೨೭೪ ಲೀಟರ್ ಮಜ್ಜಿಗೆ ಮಾರಾಟ. ♦ ಪ್ರತಿ ತಿಂಗಳೂ ೭೮೦೭೬ ಲೀ ತುಪ್ಪ, ೨೨೦೦ ಕೆ.ಜಿ. ಪೇಡ, ೯೨೭೪ ಲೀಟರ್ ಮಜ್ಜಿಗೆ ಮಾರಾಟ. ♦ ೨೦೧೦-೧೧ ರಲ್ಲಿ ಒಟ್ಟು ವಹಿವಾಟು ೨೮೫.೩೧ ಕೋಟಿ ರೂ. ♦ ೧೯೭-೨೦ ಕೋಟಿ ರೂ. ಮೌಲ್ಯದ ಹಾಲು ಮತ್ತು ಹಾಲು ಉತ್ಪನ್ನಗಳ ಖರೀದಿ ಮಾರಾಟ ದಿಂದ ದಿಕ್ಕಿದ್ದು ೨೪೨.೬೬ ಕೋಟಿ ರೂ. ♦೨೦೧೦-೧೧ ನೇ ಸಾಲಿನ ನಿವ್ವಳ ಲಾಭ ೩೦೧-೦೫ ಲಕ್ಷ ರೂ. ಇದು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಾಧನೆಯ ಚಿತ್ರಣ. `ವ್ಯವಸಾಯ ಮನೆ ಮಕ್ಕಳೆಲ್ಲ ಸಾಯ್ಳ’ ಅನ್ನುವಂತಹ ದುರ್ಬರ ದಿನಗಳಲ್ಲಿ ಹೈನುಗಾರಿಕೆ ರೈತನ ಅನಿವಾರ್ಯ ಉಪಕಸುಬಾಗಿದೆ. ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ರೈತರು ಹೈನುಗಾರಿಕೆಯನ್ನು ತಬ್ಬಿಕೊಂಡ ಪರಿಣಾಮ ಜಿಲ್ಲೆಯಲ್ಲಿ ಇಂದು ಹಾಲಿನ ಹೊಳೆ ಹರಿಯು ತ್ತಿದೆ. ಏರುಮುಖದತ್ತ ಹಾಲು ಉತ್ಪದಾನೆ: ವರುಷದಿಂದ ವರುಷಕ್ಕೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಗತಿ ಪಥದತ್ತ ಸಾಗಿದೆ. ೨೦೦೬-೦೭ ರಲ್ಲಿ ೬೬೨ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ೧.೮೯ ಲಕ್ಷ ಕೆ.ಜಿ ಹಾಲು ಶೇಖರಣೆ ಆಗುತ್ತಿತ್ತು. ೨೦೦೭-೦೮ ರಲ್ಲಿ ೨.೧೭ ಲಕ್ಷ ಕೆ.ಜಿ., ೨೦೦೮-೦೯ ರಲ್ಲಿ ೨.೬೧ ಲಕ್ಷ ಕೆ.ಜಿ., ೨೦೦೯-೧೦ ರಲ್ಲಿ ೨.೯೮ ಲಕ್ಷ ಕೆ.ಜಿ. ಹಾಲು ಶೇಖರಣೆಯಾಗಿದ್ದು ೧೦- ೧೧ರ ಅಂತ್ಯದಲ್ಲಿ ೩.೩೧ ಲಕ್ಷ ಕೆ.ಜಿ. ಮುಟ್ಟಿದೆ. ೨೦೧೧-೧೨ ನೇ ಪ್ರಸಕ್ತ ಸಾಲಿನಲ್ಲಿ ದಿನವಹಿ ಸರಾಸರಿ ೩.೮೫ ಲಕ್ಷ ಕೆ.ಜಿ. ಶೇಖರಣೆ ಗುರಿ ಯನ್ನು ಜಿಲ್ಲಾ ಒಕ್ಕೂಟ ಹೊಂದಿದೆ. ಹಸಿರು ಮೇವು ಯಥೇಚ್ಚವಾಗಿ ಸಿಗುವ ತಿಂಗಳು ಗಳಲ್ಲಿ ೪.೨೫ ಲಕ್ಷ ಕೆ.ಜಿ.ಗಳಷ್ಟು ಹಾಲು ಶೇಖರಣೆಯ ನಿರೀಕ್ಷೆಯಿದೆ.

No Comments to “ದಿನವೊಂದಕ್ಕೆ ೩.೩೧ ಲಕ್ಷ ಕೆ.ಜಿ. ಹಾಲು ಶೇಖರಣೆ….!!”

add a comment.

Leave a Reply

You must be logged in to post a comment.