ಜಿಲ್ಲೆಯ ನೊಂದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸುವುದೇ…?

ತುಮಕೂರು ತುಮಕೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಸುಮಾರು ೧೮ ಕೋಟಿ ರೂ. ಮೌಲ್ಯದಷ್ಟು ರೈತರ ಬೆಳೆ ನಷ್ಟಗೊಂಡಿದೆ. ಇದರ ಜೊತೆ ಜೊತೆಗೆ ಅಕಾಲಿಕ ಮಳೆ ಸೇರಿದಂತೆ ಇನ್ನಿತರ ಪ್ರತಿಕೂಲ ಹವಾಮಾನದಿಂದಾಗಿ ರೈತರು ಕಂಗಾಲಾಗುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ರಾಜ್ಯ ಸರ್ಕಾರ `ಬೆಳೆ ಪರಿಹಾರ್ಳ’ ನೀಡುವ ಮೂಲಕ ಕಂಗಾಲಾದ ರೈತರಿಗೆ ಸ್ಪಂದಿಸಲಿದೆಯೆು…? “ಮುಂಗಾರು ಮಳೆಯೊಂದಿಗೆ ರೈತರ ಜೂಜಾಟ್ಳ’್ಳ’ ಎನ್ನುವ ನಾಣ್ಣುಡಿಯಂತೆ ಮಳೆಯನ್ನೇ ನಂಬಿ ಬಿತ್ತನೆ ಮಾಡುವ ರೈತರ ಬದುಕು ಪ್ರತಿ ಹೆಜ್ಜೆಯೂ ಆತಂಕಕಾರಿಯಾ ದದ್ದು. ಕ್ರಷಿ ಚಟುವಟಿಕೆಯ ಪ್ರಾರಂಭಿಕ ಹಂತದಿಂದಲೂ `ಕೊಯ್ಲ್ಳು’ ಮಾಡುವ ಹಂತದವರೆಗೆ ನೂರಾರು ಸವಾಲುಗಳನ್ನು ಎದುರಿ ಸಬೇಕಿದೆ. ಇದರ ಜೊತೆಗೆ `ರೈತ ನೀ ಮಂದಿ ಸಾಯ್ಳೊ’ ಎನ್ನುವಂತೆ ಕ್ರಷಿಯಲ್ಲೇ ಮನೆಮಂದಿಯಲ್ಲಾ ತೊಡಗಿದರೂ ಆ ಮುಗಿಯದ ಹಾಗೂ ಲಾಭವಿಲ್ಲದ ಬದುಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸವಲತ್ತುಗಳಲ್ಲಿ ಸಿಗುವ ಸಬ್ಸಿಡಿಗಳು ಸಮರ್ಪಕವಾಗಿಲ್ಲ. ಇದರ ಜೊತೆಗೆ ಕೂಲಿಯಾಳುಗಳ ಸಮಸ್ಯೆ, ಅಕಾಲಿಕ ಮಳೆ, ಬಿತ್ತನೆ ಬೀಜದ ಕೊರತೆ, ಜೋಡೆತ್ತುಗಳ ಕೊರತೆ ಮತ್ತು ಹಣದ ಕೊರತೆಗಳಿಂದಾಗಿ ಸಾವಿರಾರು ಮಂದಿ ರೈತರು ಕ್ರಷಿ ಯನ್ನೇ ಕೈಬಿಟ್ಟು ಗುಳೇ ಹೋಗಿ ದ್ದಾರೆ. ಇನ್ನು ಕೆಲ ರೈತರು ಹುಣಸೇ, ಮಾವು, ಸಪೋಟ ಸೇರಿದಂತೆ ಇನ್ನಿತರ ತೋಟಗಾ ರಿಕಾ ಬೆಳೆಗಳತ್ತ ಗಮನ ಹರಿಸಿ ದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿ ದರೆ ಮುಂದೊಂದು ದಿನ `ಆಹಾರ ಅಭಾವ್ಳ’ದ ಸಮಸ್ಯೆ ಸ್ರಷ್ಟಿಯಾಗುವ ಆತಂಕ ಸ್ಪಷ್ಟವೆನಿಸುತ್ತದೆ. ಬಯಲು ಸೀಮೆ ಪ್ರದೇಶ ವಾದ ತುಮಕೂರು ಜಿಲ್ಲೆಯಲ್ಲಿ ಶೇ.೮೦ ರಷ್ಟು ರೈತರು ಮಳೆಯನ್ನೇ ನಂಬಿ ಕ್ರಷಿಯಲ್ಲಿ ತೊಡಗುತ್ತಿದ್ದಾರೆ. nುತು ಮಾನದ ಬೆಳೆಗಳನ್ನು ಬೆಳೆದು ಆರ್ಥಿಕ ಲಾಭ ಮಾಡಿ ಕೊಳ್ಳ್ಳುವತ್ತ ಉತ್ಸಾಹ ತೋರಿದರೆ ಅದೇ ಸಂದರ್ಭದಲ್ಲಿ ಮಳೆ ಕೈಕೊಟ್ಟು ರೈತರ ಉತ್ಸಾಹವನ್ನು ಕಂಗೆಡಿಸು ತ್ತದೆ. ಪ್ರಸಕ್ತ ವರ್ಷ ಜಿಲ್ಲೆಯಾದ್ಯಂತ ಒಟ್ಟು ೪೮೩೮೫೦ ಹೆಕ್ಟೇರ್ಗಳ ಪೈಕಿ ಸುಮಾರು ೩೮೭೭೬೭ ಹೆಕ್ಟೇರ್ಗಳಲ್ಲಿ ವಿವಿಧ ಬೆಳೆಗಳಿಗೆ ಅಣಿ ಮಾಡಲಾ ಗಿದ್ದು, ಇದರಲ್ಲಿ ೫೫೧೪೪ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟಗೊಂಡರೆ ೯೬೦೮೩ ಹೆಕ್ಟೇರ್ನಷ್ಟು ಭೂಮಿ ೧೫.೧೨ ಲಕ್ಷ ಹೆಕ್ಟೇರ್ನಲ್ಲಿ ಬೆಳೆ ನಷ್ಟ ಉಳುಮೆಯೆು ಆಗಿಲ್ಲ. ಹಾಗಾದರೆ ಒಟ್ಟು ೧೫೧೨೨೭ ಹೆಕ್ಟೇರ್ನಷ್ಟು ಪ್ರದೇಶದಲ್ಲಿ ಕ್ರಷಿ ಬೆಳೆ ಇಲ್ಲದಂತಾ ಗಿದೆ ಎನ್ನಬಹುದು.

No Comments to “ಜಿಲ್ಲೆಯ ನೊಂದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸುವುದೇ…?”

add a comment.

Leave a Reply