`ವಿದ್ಯಾರ್ಥಿ ನಿಲಯಗಳು ಮುಚ್ಚುವ ಸ್ಥಿತಿಗೆ ಬಂದಿವೆ….!’

ತುಮಕೂರು ಕೆಲವೇ ವರ್ಷಗಳ ಹಿಂದೆ ವಿದ್ಯಾರ್ಥಿನಿಲಯಗಳಲ್ಲಿ ತಮ್ಮ ಮಕ್ಕಳ ಪ್ರವೇಶಕ್ಕಾಗಿ ಅವರಿವರ ಕೈಕಾಲು ಹಿಡಿಯಬೇಕಿದ್ದ ಸ್ಥಿತಿ ಅವರ ತಂದೆ ತಾಯಿಗಳದ್ದಾಗಿತ್ತು. ತಮ್ಮ ಮಗ ಹಾಸ್ಟಲ್ನಲ್ಲಿದ್ದು ಓದುತ್ತಿ ದ್ದಾನೆ ಅಂತ ಹೇಳೋದೇ ಹೆಮ್ಮೆಯ ವಿಷಯವಾಗಿತ್ತು. ಆದರೆ ಇಂದು ಎಲ್ಲವೂ ಉಲ್ಟಾಪಲ್ಟಾ. ಜಿಲ್ಲೆಯಲ್ಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಹಿಂದುಳಿದ ವರ್ಗಗಳ ಇಲಾಖಾ ವತಿಯಲ್ಲಿ ಜಿಲ್ಲೆಯಲ್ಲಿ ೫೮ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿದ್ದು ೨೯ ವಿದ್ಯಾರ್ಥಿ ನಿಲಯಗಳು ಪ್ರವೇಶ ಬೇಡಿಕೆ ಇಲ್ಲದೆ ಸೊರಗುತ್ತಿದೆ. ಜಿಲ್ಲೆಯ ತುರುವೇಕೆರೆ ಹಾಗೂ ಮಧುಗಿರಿ ತಾಲ್ಲೂಕುಗಳಲ್ಲಿರುವ ವಿದ್ಯಾರ್ಥಿ ನಿಲಯಗಳನ್ನ ಹೊರತು ಪಡಿಸಿ ಉಳಿದೆಲ್ಲಾ ತಾಲ್ಲೂಕುಗಳ ಲ್ಲಿನ ವಿದ್ಯಾರ್ಥಿ ನಿಲಯಗಳು ವಿದ್ಯಾ ರ್ಥಿಗಳಿಲ್ಲದೆ ಹಾಳು ಸುರಿಯುತ್ತಿವೆ. ಪ್ರವೇಶ ಬೇಡಿಕೆ ಇಲ್ಲದ ವಿದ್ಯಾರ್ಥಿ ನಿಲಯಗಳ ಮಂಜೂ ರಾತಿ ಸಂಖ್ಯಾಬಲ ಕಡಿತಗೊಳಿ ಸಲು ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇಪ್ಪತ್ತಕ್ಕೂ ಕಡಿಮೆ ವಿದ್ಯಾರ್ಥಿಗಳಿರು ವಂತ ವಿದ್ಯಾರ್ಥಿ ನಿಲಯಗಳನ್ನು ಮುಚ್ಚಿ ಅಲ್ಲಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪೂರ್ವ ಭಾವಿ ಸಿದ್ದತೆಗಳು ಆರಂಭವಾಗಿವೆ. ಶಿರಾ ತಾಲ್ಲೂಕು ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ ತಲಾ ಏಳು ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯಗ ಳಿದ್ದು ಎಲ್ಲ ೧೪ ವಿದ್ಯಾರ್ಥಿ ನಿಲಯ ಗಳೂ ವಿದ್ಯಾರ್ಥಿಗಳ ಪ್ರವೇಶ `ಬರ್ಳ’ಕ್ಕೆ ತುತ್ತಾಗಿವೆ. ಕಳೆದ ೪-೫ ವರ್ಷಗಳಿಂದ ಈಚೆಗೆ ವಿದ್ಯಾರ್ಥಿ ನಿಲಯಗಳ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಪ್ರಮಾಣ ದಲ್ಲಿ ಕುಸಿತ ಕಂಡು ಬರುತ್ತದೆ. ಸಂಖ್ಯಾಬಲ ಮರು ನಿಗಧಿ ಪ್ರವೇಶ ಬೇಡಿಕೆ ಇಲ್ಲದ ೨೯ ವಿದ್ಯಾರ್ಥಿ ನಿಲಯಗಳನ್ನು ಇಲಾಖೆ ಗುರುತಿಸಿದ್ದು ಅಲ್ಲಿನ ಮಂಜೂರಾತಿ ಸಂಖ್ಯಾಬಲವನ್ನು ಕಡಿತ ಗೊಳಿಸಿ ಮರು ನಿಗಧಿ ಪಡಿಸಲಾಗಿದೆ. ಗುರುತಿಸಲ್ಪಟ್ಟಿರುವ ೨೯ ವಿದ್ಯಾರ್ಥಿ ನಿಲಯಗಳಲ್ಲಿನ ಒಟ್ಟು ಮಂಜೂ ರಾತಿ ಸಂಖ್ಯೆ ೧೪೫೫ ಇದ್ದದ್ದು ಇದೀಗ ೧೦೪೫ ಕ್ಕೆ ಇಳಿದಿದೆ. ಜಿಲ್ಲೆಯ ಎಂಟು ತಾಲ್ಲೂಕುಗಳಿಂದ ಒಟ್ಟು ೪೧೦ ಬಾಲಕ/ ಬಾಲಕಿಯ ( ಹಿಂದುಳಿದ ವರ್ಗ) ಪ್ರವೇಶ ಸಂಖ್ಯೆರದ್ದು ಪಡಿಸಲಾಗಿದೆ. ಮೆಟ್ರಿಕ್ ಪೂರ್ವ ಬಾಲಕ / ಬಾಲಕಿಯ ವಿದ್ಯಾರ್ಥಿ ನಿಲಯಗಳ ಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ಗಳಿಗೆ ಪ್ರತಿ ಮಾಹೆಗೆ ರೂ ೭೫೦ ನ್ನು ಭೋಜನ ವೆಚ್ಚಕ್ಕೆಂದು ಬಿಡುಗಡೆ ಮಾಡಲಾಗುತ್ತಿದೆ. ಇದೀಗ ೪೧೦ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿತಗೊಂಡಿರುವುದರಿಂದ ಸರ್ಕಾರಕ್ಕೆ ತಿಂಗಳಿಗೆ ೩.೦೭೫ ಲಕ್ಷ ರೂ. ಗಳಂತೆ ಪ್ರಸಕ್ತ ಶೈಕಣಿಕ ವರುಷದಲ್ಲಿ ೩೦.೭೫ ಲಕ್ಷ ರೂ. ಉಳಿತಾಯವಾಗಲಿದೆ. ಕೊರಟಗೆರೆಯಲ್ಲಿ ವಿದ್ಯಾರ್ಥಿಗಳ `ಬರ್ಳ’ ಈ ತಾಲ್ಲೂಕಿನಲ್ಲಿ ಏಳು ಮೆ. ಪೂ. ಬಾಲಕ / ಬಾಲಕಿಯ ವಿದ್ಯಾರ್ಥಿ ನಿಲಯಗಳಿದ್ದು ಎಲ್ಲಾ ಏಳು ವಿದ್ಯಾರ್ಥಿ ನಿಲಯಗಳೂ ಪ್ರವೇಶ ಬರ ಎದುರಿಸುತ್ತಿವೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳೆ ರಡೂ ಈ ಸಮಸ್ಯೆಗೆ ತುತ್ತಾಗಿರು ವುದು ವಿಶೇಷ ಪಟ್ಟಣದಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ ೫೦ ರಿಂದ ೩೦ ಕ್ಕೆ ಇಳಿದಿದೆ. ಕೋಳಾಲ, ತೋವಿನ ಕೆರೆ, ಗೋಡ್ರ ಹಳ್ಳ್ಳಿ ಹಾಗೂ ವಡ್ಡಗೆರೆ ಗ್ರಾಮಗಳಲ್ಲಿನ ವಿದ್ಯಾರ್ಥಿ ನಿಲಯ ಗಳಲ್ಲಿನ ಪ್ರವೇಶ ಸಂಖ್ಯೆಯಲ್ಲೂ ಕಡಿತ ಮಾಡಲಾಗಿದೆ.

No Comments to “`ವಿದ್ಯಾರ್ಥಿ ನಿಲಯಗಳು ಮುಚ್ಚುವ ಸ್ಥಿತಿಗೆ ಬಂದಿವೆ….!’”

add a comment.

Leave a Reply