`ಕಣ್ಣಂಚಲ್ಳಿ’ ಬಿಡುಗಡೆಗೆ ರೆಡಿ

ಹ.ಸೂ. ರಾಜಶೇಖರ್, ಸುನಿಲ್ಕುಮಾರ್ ದೇಸಾಯಿ, ಎಸ್. ನಾರಾಯಣ್ ರಂಥ ನಿರ್ದೇಶಕರ ಜೊತೆ ಕೆಲಸ ಮಾಡಿದ ರವಿಪೂಜಾರಿ ಪ್ರೀತಿ ಪ್ರೇಮದ ವಿಷಯಗಳನ್ನಿಟ್ಟು ಕೊಂಡು ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇಬ್ಬರು ನಾಯಕರ ಜೀವನದಲ್ಲಿ ನಾಯಕಿಯ ಪ್ರೀತಿ ಹೇಗೆ ತಿರುವು ಪಡೆದು ಕೊಳ್ಳ್ಳುತ್ತದೆ ಎಂಬುದನ್ನು ಹೇಳಲಿರುವ ಈ ಚಿತ್ರದ ಹೆಸರು ಫ`ಕಣ್ಣಂಚಲಿಫ. ಪ್ರೀತಿ ಯಲ್ಲೂ ಒಂದು ಕನಸಿರುತ್ತದೆ ಅದು ಸಿಹಿಕನಸೇ ಆಗಿರುತ್ತದೆ. ಎಂಬ ಅಡಿ ಬರಹದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರದ ಕಥೆ-ಚಿತ್ರಕಥೆ ಹಾಗೂ ಸಂಬಾಷಣೆ ಬರೆದಿರುವವರು ಕೆ. ರಾಮ್ ನಾರಾಯಣ್. ಈ ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದ್ದು ಬರುವ ತಿಂಗಳ ಅಂತ್ಯದಲ್ಲಿ ರಾಜ್ಯಾದ್ಯಂತ ತರೆಕಾಣಲಿದೆ. ಕಳೆದವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಫ ನೆಲಮಂಗಲದ ಮಹಿಳಾ ಸಂಘದ ಅದ್ಸ್ರ್ಯಕ್ಷೆ ಅಲ್ಲದೆ, ರಿಯಲ್ ಎಸ್ಟೇಟ್ ಹಾಗೂ ಪ್ಸ್ರೈನಾನ್ಸ್ ನಡೆಸುತ್ತಿರುವ ಬಿ. ಹೇಮಾವತಿ ಈ ಚಿತ್ರದ ನಿರ್ಮಾಪಕಿ. ಬೆಂಗಳೂರು, ಸಕಲೇಶಪುರ, ಹೊನ್ನಾವರ, ಗೋಕರ್ಣ ಹಾಗೂ ಬಳ್ಳ್ಳಾರಿ ಸಮೀಪದ ಹಿರಿಯೂರು ಗ್ರಾಮದಲ್ಲಿ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿರುವ ಈ ತ್ರಿಕೋನ ಪ್ರೇಮಕಥೆಯಲ್ಲಿ ಅನಿಲ್ ಹಾಗೂ ಶ್ವೇತಾರಾವ್ ನಾಯಕ-ನಾಯಕಿಯಾಗಿದ್ದು, ಅರ್ಚನಾ ಎಂಬ ಇನ್ನೊಬ್ಬ ನಾಯಕಿ ಕೂಡ ಇದ್ದಾಳೆ. ನಾಯಕಿಯ ಸ್ನೇಹಿತೆಯಾಗಿರುವ ಈಕೆ ಚಿತ್ರದ ಕೆಲ ಟ್ವಿಸ್ಟ್ಗಳಿಗೆ ಕಾರಣಳಾಗುತ್ತಾಳೆ. ಚಿತ್ರದ ೬ ಹಾಡುಗಳಿಗೆ ಎಸ್. ನಾಗು ಸಂಗೀತ ಸುಯೋಜನೆ ಮಾಡಿದ್ದು, ೩ ಹಾಡುಗಳನ್ನು ರಾಮ್ನಾರಾಯಣ್ ಅವರೇ ಬರೆದಿದ್ದಾರೆ. ಉಳಿದಂತೆ ಆನಂದ್, ಶ್ರೀಹರ್ಷ, ನಿರ್ದೇಶಕ ರವಿಪೂಜಾರಿ ಕೂಡ ಒಂದೊಂದು ಹಾಡನ್ನು ಬರೆದಿದ್ದಾರೆ. ಫಎಲ್ಲಾ ಕಥೆಗಳ ಹಾಗೇ ಇದೂ ಕೂಡ ಒಂದು ತ್ರಿಕೋನ ಪ್ರೇಮ ಕಥೆಯೆ ಆದರೂ, ನಿರೂಪಣಾ ಶೈಲಿಯಲ್ಲಿ ವಿಭಿನ್ನತೆ, ವಿಶೇಷತೆ ಇದೆ. ಚಿತ್ರದ ಕ್ಲೆಮ್ಯಾಕ್ಸ್ ತಂಬಾ ಅದ್ಬುತವಾಗಿದೆ ಎಂದು ನಿರ್ಮಾಪಕಿ ಬಿ. ಹೇಮಾವತಿ ಹೇಳಿಕೊಂಡರು. ಶ್ರೀರಾಮ್ ಇನ್ನೊಬ್ಬ ನಾಯಕನ ಪಾತ್ರದಲ್ಲಿದ್ದು ವಿಶ್ವ, ಶಶಿ, ರಮೇಶ್ಭಟ್, ನೆ.ಲ.ನರೇಂದ್ರಬಾಬು, ಸತ್ಯಜಿತ್, ಎಂ.ಎಸ್. ಉಮೇಶ್ ಉಳಿದ ತಾರಾಗಣದಲ್ಲಿದ್ದಾರೆ. ದುರ್ಗಾಶಂಕರ್ ಈ ಚಿತ್ರದ ಛಾಯಾಗ್ರಾಹಕರು.

No Comments to “`ಕಣ್ಣಂಚಲ್ಳಿ’ ಬಿಡುಗಡೆಗೆ ರೆಡಿ”

add a comment.

Leave a Reply

You must be logged in to post a comment.