ಕ್ರಷ್ಣನ ಸನ್ನಿಧಿಯಲ್ಲಿ `ಭಕ್ತ ಅಂಬರೀಶ್ಳ’

ಉಡುಪಿಯ ಶ್ರೀ ಕ್ರಷ್ಣ ಮಠದ ಆವರಣದಲ್ಲಿ ಶ್ರೀ ಲಕ್ಷ್ಮಿವರ ತೀರ್ಥ, ಪರ್ಯಾಯ ಮಠ ಶಿರೂರು ಅವರ ಆಸೆಯಂತೆ `ಭಕ್ತ ಅಂಬರೀಶ್ಳ’ ಪೌರಾಣಿಕ ನಾಟಕವನ್ನು ವಿಜಯ ದಶಮಿಯಂದು ಅಂದರೆ ಅಕ್ಟೋ ಬರ್ ೬ ರ ಸಂಜೆ ಎರಡೂವರೆ ತಾಸು ಗಳ ಪ್ರದರ್ಶನ ಹಿರಿಯ ಪ್ರತಿಭಾನ್ವಿತ ನಟ ಶ್ರೀನಿವಾಸಮೂರ್ತಿಯವರ ನೇತ್ರತ್ವದಲ್ಲಿ ಜರುಗಲಿದೆ. ಡಾ. ರಾಜ್ಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿರುವ ಈ ಪೌರಾಣಿಕ ನಾಟಕ ಕನ್ನಡ ರಂಗ ಭೂಮಿಯಲ್ಲಿ ಬಹಳ ಪ್ರಸಿದ್ಧವಾಗಿದ್ದು ಇದನ್ನು ಸಿನಿಮಾ ಮಾಡಲು ಕೂಡ ಡಾ. ರಾಜ್ ಸಂಸ್ಥೆ ತಯಾರಿಯನ್ನು ಮಾಡಿಕೊಂಡಿತ್ತು. ಇದನ್ನು ಗಮನದಲ್ಲಿಟ್ಟು ಕೊಂಡೇ ಹಲವಾರು ಪುಸ್ತಕಗಳನ್ನು ಓದಿ ತಿಳಿದು ಶ್ರೀ ರುದ್ರಮೂರ್ತಿ ಶಾಸ್ತ್ರಿಗಳ ಸಹಾಯದೊಂದಿಗೆ ಶ್ರೀನಿವಾಸ ಮೂರ್ತಿಯವರು ನೂತನ ನಾಟಕವನ್ನೇ ಸಿದ್ಧಪಡಿಸಿ ಈಗ ವೊದಲ ಪ್ರುಯೋಗವನ್ನು ಶ್ರೀ ಲಕೀ¤್ಮವರ ತೀರ್ಥ, ಪರ್ಯಯಾಮಠ ಶಿರೂರು ಅವರ ಆಸೆಯಂತೆ ಪ್ರದರ್ಶಿಸಲಿದ್ದಾರೆ. ಇದೇ ನಾಟಕವನ್ನು ಅಕ್ಟೋಬರ್ ೧೫ ರಂದು ರವೀಂದ್ರ ಕಲಾಕೇತ್ರದಲ್ಲಿ ಪ್ರದರ್ಶಿಸಲು ನಿಶ್ಚಯವಾಗಿದೆ. ಅಂದು ಕನ್ನಡದ ಹೆಸರಾಂತ ನಟರುಗಳು ಪಾಲ್ಗೊಳ್ಳ್ಳುವ ಸಾದ್ಸ್ರ್ಯತೆಯಿದೆ. ಉಡುಪಿಯಲ್ಲಿ ಪ್ರದರ್ಶಿಸಲ್ಪಡುವ ಪೌರಾಣಿಕ ನಾಟಕ `ಭಕ್ತ ಅಂಬರೀಶ್ಳ’ ಇದೀಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕೆಲವು ದಿವಸಗಳ ಮುಂಚೆಯೋ ಒಂದು ಲಾರಿಯಲ್ಲಿ ಬೇಕಾಗುವ ವಸ್ತ್ರ ವಿನ್ಯಾಸಗಳು ಹಾಗೂ ಒಂದು ಬಸ್ಸಿನಲ್ಲಿ ಕಲಾವಿದರ ತಂಡವೇ ಪ್ರಯಾಣ ಮಾಡಲಿದೆ. ಈ ನಾಟಕದಲ್ಲಿ ೧೩ ಗೀತೆಗಳು ರಾಗಸುಯೋಜನೆಯಾಗಿದೆ. ಇದು ಜೆಕೆಎಸ್ ಮಿತ್ರಮಂಡಳಿಯ ವೊದಲ ಪ್ರಯತ್ನ. ಶ್ರೀನಿವಾಸ ಮೂರ್ತಿ ನಿರ್ದೇಶನದ ಜೊತೆಗೆ ಅಂಬರೀಶನ ಪಾತ್ರದಲ್ಲಿ ಕಾಣಿಸಿಕೊಳ್ಳ್ಳಲಿದ್ದಾರೆ, ದೂರ್ವಾಸನಾಗಿ ರಮೇಶ್ ಭಟ್, ಶ್ರೀ ವಿಷ್ಣುವಾಗಿ ನವೀನ್ ಕ್ರಷ್ಣ, ಡಿಂಗ್ರಿ ನಾಗರಾಜ್, ಸಂಗಮೇಶ್, ಆಶಾರಾಣಿ ಹಾಗೂ ಕನ್ನಡದ ೨೫ಕ್ಕೂ ಹೆಚ್ಚು ಕಲಾವಿದರುಗಳು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಇದೇ ನಾಟಕ ರಾಜ್ಯಾದ್ಯಂತ ಪ್ರವಾಸ ಮಾಡಿ ನಂತರ ಹೊರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಪ್ರದರ್ಶಿಸಲ್ಪಡುವ ಯೋಚನೆಯಲ್ಲಿದ್ದಾರೆ ಶ್ರೀನಿವಾಸಮೂರ್ತಿ ಅವರು. ಕಳೆದ ಸೋಮವಾರ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ ಮೂರ್ತಿ ತಂಡ ಅಂದು ಒಂದು ರಂಗಗೀತೆಯನ್ನು ಹಾಗೂ ರಮೇಶ್ ಭಟ್ ಮತ್ತು ನವೀನ್ ಕ್ರಷ್ಣ ಒಂದು ಪ್ರಸಂಗವನ್ನು ನಾಟಕದಿಂದ ಪ್ರದರ್ಶಿಸಿದರು.

No Comments to “ಕ್ರಷ್ಣನ ಸನ್ನಿಧಿಯಲ್ಲಿ `ಭಕ್ತ ಅಂಬರೀಶ್ಳ’”

add a comment.

Leave a Reply

You must be logged in to post a comment.