ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ – ಕುಂಚ ಹಿಡಿದ `ಕಲಾ ಗಾರುಡಿಗ್ಳ’ ರಾಮಚಂದ್ರನ್

        ತುಮಕೂರು ವರ್ಣ ತೀರಗಳತ್ತ ಚಲಿಸುವ ಸ್ವಪ್ನ ನಾವಿಕ ಕಲಾವಿದ ಕೆ.ಎನ್. ರಾಮಚಂದ್ರನ್ ರವರ `ಏಕವ್ಯಕ್ತ್ಳಿ’ ಚಿತ್ರಕಲಾ ಪ್ರದರ್ಶನ್ಳ’ ನಗರದ ರವೀಂದ್ರ ಕಲಾನಿಕೇತನದಲ್ಲಿ ನಡೆಯಿತು. ಪ್ರಸ್ತುತ ಸಂಧರ್ಭದಲ್ಲಿ ಕಲಾ ವಿದ ಎಂದರೆ ಸಾಕು ಮೂಗು ಮೂರಿಯುವ ಮಂದಿ ಇದ್ದಾರೆ. ಅಂಥಹವರ ಮುಖದ ಮೇಲೆ ಹೊಡೆಯುವಂತೆ ಸತತ ಪರಿಶ್ರಮ, ಶ್ರದ್ದೆಯಿಂದ ಬ್ಯಾನರ್ ಕಲೆಗೊಂದು ಹೊಸ ಘನತೆಯನ್ನು ಕಂಡುಕೊಟ್ಟ ವರು ಕೆ.ಎನ್. ರಾಚಂದ್ರನ್. ಅಷ್ಟೆ ಅಲ್ಲ ಈ ನಾಡಿನ ಅಗ್ರ ಪಂಕ್ತಿಯ ಕಲಾವಿದರಲ್ಲೊಬ್ಬರೂ, ತಮಿಳು ನಾಡಿನ ಕಡಲ ತೀರದ ಪಟ್ಟಕೊಟ್ಟೆ ನಲ್ಲಿ ೧ ಮೇ ೧೯೩೭ರಲ್ಲಿ ಜನಿಸಿದ ರಾಮ ಚಂದ್ರನ್ ಗೆ ಬಾಲ್ಯದಿಂದಲೇ ದೋಣಿಗಳ ಹುಚ್ಚು, ಶಾಲೆಯ ನೋಟ್ ಪುಸ್ತಕದಲ್ಲಿ ಬಗೆ ಬಗೆಯ ದೋಣಿಗಳನ್ನು ಬಿಡಿಸುತ್ತಿದ್ದ ಈ ಹುಡುಗನನ್ನು ಗಮನಿಸಿದ ಶಿಕ್ಷಕರುಮ ತಂದೆಯ ಬಳಿ `ಇವನೊಬ್ಬ ಕಲಾ ವಿದನಾಗುತ್ತಾನೆ.್ಳ’ ಎಂದರು. ಸ್ವತಃ ಸಂಗೀತಗಾರರಾಗಿದ್ದ ತಂದೆಗೆ ಖುಷಿಯೆು ಆಯಿತು. ಹೀಗೆ ತಮ್ಮ ಬಾಲ್ಯದ ದಿನಗಳಿಂದಲೂ ಕಲೆಯ ಬಗ್ಗೆ ಆಸಕ್ತಿ ಇತ್ತು. ಪರಿಣಾಮವಾಗಿ ನಾಡಿನ ಕಲಾವಿದರಲ್ಲಿ ಇವರು ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ನಗರದ `ರವೀಂದ್ರ ಕಲಾನಿ ಕೇತನ್ಳ’ ದಲ್ಲಿ ಇವರ ಸುಮಾರು ೩೦ ವಾಸ್ತವಿಕ ಶೈಲಿಯ ಕಲಾಕ್ರತಿಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ. ಅವರೊಳಗಿನ ಕಲಾವಿದ ಇಷ್ಟಕ್ಕೆ ತ್ರಪ್ತನಾಗದೇ ಬ್ಯಾನರ್ ಚಿತ್ರಗಳನ್ನು ವ್ರತ್ತಿಯನ್ನಾಗಿರಿಸಿಕೊಂಡು ನಿಸರ್ಗ ಚಿತ್ರಗಳನ್ನು, ವ್ಯಕ್ತಿ ಚಿತ್ರಗಳನ್ನು ಸಾಕಷ್ಟು ಮಾಡಿದ್ದಾರೆ. ಇದರಲ್ಲಿ ಲ್ಯಾಂಡ್ ಸ್ಕೇಪ್ ಅಂದಾಕ್ಷಣ ಮನುಷ್ಯರಿಲ್ಲದ ಗುಡ್ಡ, ಬೆಟ್ಟ, ಕಾಡುಗಳೇ ನಮ್ಮ ಮನಸ್ಸಿಗೆ ಬರ ಬೇಕಾಗಿಲ್ಲ. ಮನುಷ್ಯರಿಂದ ತುಂಬಿ ತುಳುಕುವ ಪೇಟೆ, ಅಂಗಡಿ ಬೀದಿಗಳೂ `ನಿಸರ್ಗ್ಳ’ ಚಿತ್ರಗಳೇ ರಾಮಚಂದ್ರನ್ ರವರ ಇತ್ತೀಚಿನ ಕಲಾ ಕ್ರತಿಗಳು. ದುಡಿಮೆಯ ಜೀವಗಳ ಈ ಕಲಾಕ್ರತಿಗಳು ಕರುಣೆಯಿಂದ ಕಂಗೊಳಿಸುತ್ತಿವೆ. ಈವರೆವಿಗೂ ಮೂರು ಏಕವ್ಯಕ್ತಿ ಪ್ರದರ್ಶನ ನೀಡಿರುವ ರಾಮಚಂದ್ರನ್ರವರ ಕಲಾಕ್ರತಿಗಳು, ಮ್ಯೂರಲ್ಗಳು ದೇಶ ವಿದೇಶಗಳ ಕಲಾಸಂಗ್ರಹ ಕಾರರ ಬಳಿ ಇವೆ. ಬ್ಯಾನರ್ ಕಲಾವಿದರಿಗೆ ಉಗ್ರವರ್ಣ ಮತ್ತು ವೈರುಧ್ಯಗಳ ವ್ಯಾವೋಹ ಜಾಸ್ತಿ, ಆದರೆ ಇದನ್ನೇ ಸಂಯಮದಿಂದ ಬಳಸಿದರೆ ಫಲಕಾರಿಯಾಗ ಬಹುದು ಎನ್ನುವುದಕ್ಕೆ ರಾಮ ಚಂದ್ರನ್ರವರ ವ್ಯಕ್ತಿ ಚಿತ್ರಗಳೇ ಸಾಕಿಯಾಗಲಿವೆ. ಈ ಸಂಧರ್ಭದಲ್ಲಿ ಸುದ್ಧಿಗಾರ ರೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಬಾಬು ರಾವ್ ಕುಂದ ಗೋಳ ಮಾತನಾಡಿ ಚಿತ್ರಕಲಾ ಪದವಿ ವಿದ್ಯಾರ್ಥಿಗಳಿಗೆ ಸುಮಾರು ೨೦೦ ಮಂದಿಗೆ ವಿವಿಧ ಕಲಾಪಂಥ ಗಳನ್ನು ಪರಿಚಯಿಸಲಾಗುತ್ತಿದೆ. ಕಲಾವಿದರುಗಳಿಗೆ ಉತ್ತೇಜನ ಮುಖ್ಯ. ಇವರು ಶ್ರೇಷ್ಠ ಕಲಾವಿದ ರುಗಳಿಗೆ ಮಾರ್ಗದರ್ಶನರಾಗಿದ್ದು ಇಡೀ ಮನೆ ಮಂದಿಯೆುಲ್ಲ `ಕಲ್ಳೆ’ ಸೇವೆಗೆ ತೊಡಗಿಕೊಂಡಿರುವುದು ಶ್ಲಾಘನಿಯವೆಂದರು. ಕಲಾವಿದ ಕೆ.ಎನ್. ರಾಮ ಚಂದ್ರನ್ ಮಾತನಾಡಿ ಈ ಎಲ್ಲಾ ಪೆಯಿಂಟ್ಗಳು ವಾಸ್ತವಿಕ ಶೈಲಿ ಯಲ್ಲಿ ಮಾಡಲಾಗಿದೆ ಎಂದು ತಮ್ಮ ಕಲಾಕ್ರತಿಗಳ ಬಗ್ಗೆ ವಿವರಿಸಿದರು.

No Comments to “ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ – ಕುಂಚ ಹಿಡಿದ `ಕಲಾ ಗಾರುಡಿಗ್ಳ’ ರಾಮಚಂದ್ರನ್”

add a comment.

Leave a Reply

You must be logged in to post a comment.