ಪಂಚಾಯ್ತಿ ಚುನಾವಣೆ ನಡೆಸದಿದ್ದರ್ದರೆ ಕೋರ್ಟ್ ವೊರೆ

ರಾಜ್ಯದಲ್ಲಿ ಅಧಿಕಾರ ನಡೆ ಸುತ್ತಿರುವ ಬಿಜೆಪಿ ಸರ್ಕಾರ ಗ್ರಾಮ ಪಂಚಾಯ್ತಿ ಚುನಾವಣೆಗೆ ಮುಂದಾ ಗದೇ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ್ಯಾಯಾಲಯದ ಮೆಟ್ಟಿಲು ಹತ್ತುವವರೆಗೂ ಗಂಭೀರ ಚಿಂತನೆ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆ ಗಳನ್ನು ನಿಗದಿತ ವೇಳೆಯಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೊಗಕ್ಕೆ ಮನವಿ ಮಾಡಲಾ ಗಿದ್ದು, ಸರ್ಕಾರ ಇದನ್ನು ಮುಂದೂ ಡುವ ಪ್ರಯತ್ನ ಮಾಡಬಾರದು. ಒಂದು ವೇಳೆ ಮುಂದೂಡಿಕೆಗೆ ಯತ್ನಿಸಿದರೆ ಅಗತ್ಯವಾದ ಕಾನೂನು ರೀತಿಯ ಹೋರಾಟವನ್ನು ಮಾಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಚುನಾವಣೆ ಮುಂದೂಡಿ ಆ ಹಣವನ್ನು ದುರ್ಬಳಕೆ ಮಾಡಿ ಕೊಳ್ಳುವ ಹುನ್ನಾರವನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ನಡೆಸುತ್ತಿ ದ್ದಾರೆ. ಇದರ ಸುಕ್ಷ್ಮತೆಯನ್ನು ಅರಿತು ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಎಚ್ಚರಿಕೆ ನೀಡುವುದಾಗಿ ತಿಳಿಸಿರುವ ದೇಶಪಾಂಡೆ, ಕಾನೂನು ರೀತಿ ಹೋರಾಟ ಮಾಡಲು ಸಹ ಮುಂದಾಗುವುದಾಗಿ ಹೇಳಿದರು. ಗ್ರಾಮ ಪಂಚಾಯ್ತಿಗೆ ಕೇಂದ್ರ ಸರ್ಕಾರದಿಂದ ಭಾರಿ ಪ್ರಮಾಣದ ನೆರವು ಹರಿದು ಬರುತ್ತಿದೆ. ಆ ಹಣವನ್ನು ದುರ್ಬಳಕೆ ಮಾಡಿಕೊ ಳ್ಳುವ ಎಲ್ಲಾ ಪ್ರಯತ್ನವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಅವರಿಗೆ ಚುನಾವಣೆ ನಡೆಸಿ ಚುನಾಯಿತ ಸರ್ಕಾರಕ್ಕೆ ಅಧಿಕಾರ ನೀಡುವ ಯಾವುದೇ ಉದ್ದೇಶವಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿ ರುವ ಬಿಜೆಪಿ ಎಲ್ಲಾ ರಂಗ ದಲ್ಲಿಯೂ ವಿಫಲವಾಗಿದ್ದು, ಬ್ರಹತ್ ಬೆಂಗಳೂರು ಮಹಾ ನಗರದ ಪಾಲಿಕೆ ಚುನಾವಣೆಯಲ್ಲಿ ಪರಾಜಯಗೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ ಎಂಬ ವಿಶ್ವಾಸವಿದೆ. ಅಗತ್ಯವಿದ್ದಲ್ಲಿ ಜಾತ್ಯ ತೀತ ತತ್ವಗಳ ಜೊತೆ ಕೈ ಜೋಡಿಸಿ ಅಧಿಕಾರ ಹಿಡಿಯುವ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು ಎಂದರು.

No Comments to “ಪಂಚಾಯ್ತಿ ಚುನಾವಣೆ ನಡೆಸದಿದ್ದರ್ದರೆ ಕೋರ್ಟ್ ವೊರೆ”

add a comment.

Leave a Reply

You must be logged in to post a comment.