೧೦ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ೮ ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿಪಾಸ್ತಿ ವಶ

ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಮುಂದುವರಿಸಿರುವ ಲೋಕಾ ಯುಕ್ತರು ಭ್ರಷ್ಠಾತಿಭ್ರಷ್ಠ ೧೦ ಅಧಿಕಾರಿಗಳ ಮನೆ ಕಛೇರಿ ಮೇಲೆ ದಾಳಿ ನಡೆಸಿ ಸುಮಾರು ೮ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಉತ್ತರ ಕನ್ನಡದ ಶಿರಸಿ ವಲಯದ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ. ರಾಮ್‌ ರಾವ್‌, ಗುಲ್ಬರ್ಗಾದ ಎಂ.ಎಸ್‌.ಐ.ಎಸ್‌ನಲಿ ಪಥ್ರ ವು ದಜರೆ ಗುಮಾಸ್ತ ಈರಣ್ಣ ಗೌಡ, ಗದಗ್‌ ಜಿಲ್ಲೆಯ ರೋಣಾದಲ್ಲಿ ಲೋಕೋಪ ಯೊಗಿ ಇಲಾಖೆಯ ಸಹಾಯಕ ಇಂಜಿನಿಯರ್‌ ಉಮಾಪತಿ, ಮಂಗ ಳೂರಿನ ಸಣ್ಣ ನೀರಾವರಿ ಕಾರ್ಯ ನಿರ್ವಹಕ ಇಂಜಿನಿಯರ್‌ ಎನ್‌.ಟಿ. ರಾಜಗೋಪಾಲ್‌, ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕಾರ್ಯನಿರ್ವ ಹಕ ಅಧಿಕಾರಿ ಇ. ಅಂಜನ್‌ಕುಮಾರ್‌, ದಾವಣಗೆರೆಯ ಲೋಕೋಪ ಇಲಾ ಖೆಯ ಸಹಾಯಕ ಇಂಜಿನಿಯರ್‌ ಹನುಮಂತಪ್ಪ, ಯಾದಗಿರ್‌ ಜಿಲ್ಲಾ ಪಂಚಾಯತ್‌ ಪ್ರಥಮ ದರ್ಜೆ ಗುಮಾಸ್ತ ಜಯರಾಮ್‌ ಸೋಮಪ್ಪ ಕಟ್ಟಿಮನಿ, ಉಡುಪಿಯ ಸಬ್‌ರಿಜಿ ಸ್ಟ್ರಾರ್‌ ಪರಮೇಶ್ವರ, ಚಿಕ್ಕಬಳ್ಳಾಪುರ ಸಬ್‌ರಿಜಿಸ್ಟ್ರಾರ್‌ ವಿಷ್ಣುತೀರ್ಥ, ಬೆಂಗಳೂರಿನ ಬೊಮ್ಮನ ಹಳ್ಳಿಯ ಸಬ್‌ರಿಜಿಸ್ಟ್ರಾರ್‌ ಚಲುವರಾಜು ಇವರುಗಳೇ ಲೋಕಾಯುಕ್ತ ದಾಳಿಗೆ ಸಿಲುಕಿರುವ ಭ್ರಷ್ಠ ಅಧಿಕಾರಿಗಳು. ಈ ೧೦ ಮಂದಿ ಭ್ರಷ್ಟ ಅದಿಕ್ಸ್ರ ಾರಿಗಳ  ಅಕವ್ರು ಆಸಿ್ತ ಪಾಸಿ್ತ ಬಗ್ಗೆ ಪತಿ ಕ್ರಾ ಗೊ ಷ್ಠಿಯ ಲಿ್ಲ ಲೊಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಹಾಗೂ ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಆರ್‌. ಕೆ. ದತ್ತ ಈ ಭ್ರಷ್ಟ ಅಧಿಕಾರಿಗಳಿಂದ ಇದುವರೆಗೂ ೮ ಕೋಟಿ ಮೌಲ್ಯದ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳಲಾ ಗಿದ್ದು, ತನಿಖೆ ಮುಂದುವರಿದಿದೆ ಎಂದರು.

No Comments to “೧೦ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ೮ ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿಪಾಸ್ತಿ ವಶ”

add a comment.

Leave a Reply

You must be logged in to post a comment.