logo click here
Last updated: 2010-02-09 10:55:17
E-Paper
Archives
February 2010
M T W T F S S
« Jan   Mar »
1234567
891011121314
15161718192021
22232425262728

ಜಿಲ್ಲೆಗೆ ಬಂದಿರುವ ೫ ಕಾಡಾನೆಗಳು

ಐದು ಕಾಡಾನೆಗಳು ತುಮ ಕೂರು ಜಿಲ್ಲೆಗೆ `ಅತಿಥಿಗಳಾಗಿ’ ಆಗಮಿಸಿದ್ದು, ಕೆಲವೊಂದು ಕೆರೆಗಳಲ್ಲಿ ಸ್ವಚæಂದವಾಗಿ ವಿಹರಿ ಸುತ್ತಿವೆ. ಜಿಲ್ಲೆಯ ಗಡಿ ಭಾಗದಲ್ಲಿರುವ ಮಾಗಡಿ ತಾಲ್ಲೂಕಿನ ವೀರಸಾಗರ ಕೆರೆಯ ಮೂಲಕ ಐದು ಕಾಡಾ ನೆಗಳು ತುಮಕೂರು ತಾಲ್ಲೂಕಿನ ಒಳಕಲ್ ಕೆರೆಗೆ ಶನಿವಾರ ಬಂದಿವೆ. ಅಲ್ಲಿಂದ ಮುಂದುವರಿದ ಅವುಗಳು ಅರಿಯೂರು ಸಮೀಪದ ಅದಲಾಪುರ ಕೆರೆಯಲ್ಲಿ ಭಾನುವಾರ ಕಾಣಿಸಿವೆ. ಮತ್ತೆ ಅಲ್ಲಿಂದ ಮುಂದಕ್ಕೆ ಪ್ರಯಾಣಿಸಿದ ಈ ಕಾಡಾನೆಗಳು ಸೋಮವಾರ ಗುಬ್ಬಿ ಗಡಿಯ ಲ್ಲಿರುವ ಅಡಗೂರಿನ ಕೆರೆಯಲ್ಲಿ ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡ ಕ್ಷಣದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಆನೆಗಳತ್ತ ತೀವ್ರ ನಿಗಾ ವಹಿಸಿ, ಅವುಗಳ ಚಲನವಲನಗಳನ್ನು ಗಮನಿಸುತ್ತಿ ದ್ದಾರೆ. ಆನೆಗಳು ಬಂದ ದಾರಿಗೇ ಹಿಂತಿರುಗುವಂತೆ ಮಾಡಲು ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ. ಅದ್ರಷ್ಟವಶಾತ್ ಆನೆಗಳಿಂದ ಈ ವರೆಗೆ ಯಾವುದೇ ತೊಂದರೆ ಉಂಟಾಗಿಲ್ಲ.


Tuesday, February 9th, 2010 at 10:55 am

SocialTwist Tell-a-Friend

Be the first to write to Editor

Write to the Editor