ಸಬ್ಇನ್ಸ್ಪೆಕ್ಟರ್ ಹುದ್ದೆ : ಮರು ಪರೀಕ್ಷೆ
ಕಳೆದ ಭಾನುವಾರದಂದು ನಡೆದ ರಾಜ್ಯ ಪೊಲೀಸ್ ಇಲಾಖೆ ಯ ೪೦ ಸಿವಿಲ್ ಸಬ್ ಇನ್ಸ್ ಪೆಕ್ಟರ್ಗಳ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಬಗ್ಗೆ ಸಂಶಯ, ಆಕ್ಷೇಪ, ಅಸಮಾಧಾನ ವ್ಯಕ್ತವಾಗಿ ರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಟಿ.ರಮೇಶ್ ತಿಳಿಸಿದ್ದಾರೆ. ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ೧ ಹಾಗೂ ೨ ಪತ್ರಿಕೆಗಳ ವಿವಾದ ಗಳು ಉಂಟಾಗಿದ್ದು, ಸಾರ್ವಜನಿ ಕರ ಹಿತದ್ರಷ್ಟಿಯಿಂದ ಹಾಗೂ ಅಭ್ಯರ್ಥಿಗಳ ಮನಸ್ಸಿನಲ್ಲಿರುವ ಸಂಶಯಗಳನ್ನು ನಿವಾರಿಸಲು ಎರಡೂ ಪರೀಕ್ಷೆಗಳನ್ನು ಮತ್ತೆ ನಡೆಸಲು ತೀರ್ಮಾನಿಸಿದೆ ಎಂದು ಅವರು ಹೇಳಿದರು. ಪ್ರಶ್ನೆ ಪತ್ರಿಕೆಯ ೧೦ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಇರುವ ನಾಲ್ಕು ಉತ್ತರಗಳಿಗೆ ಯಾವುದನ್ನೂ ಆಯ್ಕೆು ಮಾಡಿದರೂ. ಸರಿ ಉತ್ತರ ಹೊಂದುತ್ತಿಲ್ಲದಿರುವುದರಿಂದ ಈ ಪ್ರಶ್ನೆ ಪತ್ರಿಕೆಗಳು ಬಯಲಾಗಿವೆ ಎಂಬ ವದಂತಿಗಳು ಹರಡಿರುವುದ ರಿಂದ ಅಭ್ಯರ್ಥಿಗಳಲ್ಲಿ ಉಂಟಾಗಿ ರುವ ಸಂಶಯ ನಿವಾರಣೆಗೆ ಇಲಾಖೆ ಮರು ಪರೀಕ್ಷೆಗೆ ಮುಂದಾ ಗಿದೆ ಎಂದರು. ನಡೆಸಿದ ಪರಿಶೀಲ ನೆಯಲ್ಲಿ ಪರೀಕ್ಷೆಯ ಬಗ್ಗೆ ಅತ್ಯಂತ ಗೌಪ್ಯತೆ ಹಾಗೂ ಸತ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆಗಳು ಯಾವುದೇ ಭಾಗಗಳಲ್ಲಿ ಬಯಲಾಗಿಲ್ಲ. ಇದಕ್ಕೆ ಯಾವುದೇ ಸಾಕ್ಷಾಧಾರಗಳು ಇಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಗೊಂದಲ ನಿವಾ ರಣೆಗೆ ಕಳೆದ ಭಾನುವಾರದಂದು ನಡೆಸಿರುವ ಪರೀಕ್ಷೆ ಶೂನ್ಯ ವೆಂದು ಪರಿಗಣಿಸಿ ಮರು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಸದ್ಯದಲ್ಲಿಯೆು ಪರೀಕ್ಷೆ ದಿನಾಂಕ ವನ್ನು ಪೊಲೀಸ್ ಇಲಾಖೆಯ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು ಎಂದರು.